ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲ ಪಕ್ಷಗಳಿಗೂ ಅಬ್ಬರದ ಪ್ರಚಾರ ಮಾಡೋದು ಮುಖ್ಯವಾಗಿರಬಹುದು ಆದರೆ ನಮ್ಮ ಸರ್ಕಾರಕ್ಕೆ ಪ್ರಚಾರಕ್ಕಿಂತ ಮುಖ್ಯವಾದುದು ಯೋಜನೆ ಎಲ್ಲರಿಗೂ ತಲುಪುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನಮ್ಮ ಸರ್ಕಾರದ ಎಲ್ಲ ಯೋಜನೆಗಳು ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳ ಜತೆ ವರ್ಚ್ಯುಯಲ್ ಸಂವಾದದಲ್ಲಿ ಹೇಳಿದ್ದಾರೆ.
ಗಣ್ಯರ ವಾಹನಗಳ ಮೇಲೆ ಪಕ್ಷದ ಪೋಸ್ಟರ್ ಹಚ್ಚುತ್ತೇವೆ ನಿಜ ಆದರೆ ಇದು ಪ್ರಚಾರಕ್ಕಲ್ಲ, ಜನರಿಗೆ ನಮ್ಮ ಯೋಜನೆ ತಲುಪಲಿ ಎನ್ನುವುದು ನಮ್ಮ ಉದ್ದೇಶ ಎಂದಿದ್ದಾರೆ.
ದೇಶದಲ್ಲಿ ಜನೌಷಧಿ ಆರಂಭಿಸಿದ್ದೇವೆ, ಇದು ಎಲ್ಲರನ್ನು ತಲುಪುತ್ತಿದೆ. ಅಗ್ಗದ ಬೆಲೆಯಲ್ಲಿ ಬೇಕಾದ ಔಷಧಗಳು ತಲುಪುತ್ತಿವೆ. ಈ ರೀತಿ ವಿಷಯಗಳು ಎಲ್ಲರಿಗೂ ತಲುಪಬೇಕು. ಜನೌಷಧಿಯ ಉಪಯೋಗ ಪಡೆಯಿರಿ, ನೀವು ಉಳಿದವರಿಗೆ ಹೇಳಿ, ಅವರು ಇನ್ನುಳಿದವರಿಗೆ ಹೇಳುತ್ತಾರೆ ಎಂದು ಹೇಳಿದ್ದಾರೆ.