ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾರದ್ದೇ ಆಗಲಿ ವಿನಾಕರಣ ತೇಜೋವಧೆ ಮಾಡೋದು ತಪ್ಪು, ಪ್ರಕರಣ ದಾಖಲಾಯ್ತು ಎಂದ ತಕ್ಷಣವೇ ದೋಷಿ ಅಥವಾ ನಿರ್ದೋಷಿ ಅಂತೆಲ್ಲಾ ಹೇಳೋದು ಸರಿ ಅಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಪೋಕ್ಸೊ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿಗೆ ಮಾತನಾಡೋದಕ್ಕೆ ಆಗೋದಿಲ್ಲ. ಸರಿಯಾಗಿ ತನಿಖೆಯಾಗಲಿ ಆದರೆ ಸುಮ್ಮ ಸುಮ್ಮನೆ ಯಾರ ಬಗ್ಗೆಯೂ ತೇಜೋವಧೆ ಮಾಡೋದು ಸರಿಯಲ್ಲ ಎಂದಿದ್ದಾರೆ.