ಭಾರತದಲ್ಲಿದ್ದುಕೊಂಡು ಪಾಕ್‌ ಪರ ಮಾತನಾಡೋದು ಸರಿಯಲ್ಲ: ಸಚಿವ ಪ್ರಹ್ಲಾದ ಜೋಶಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಪಾಕಿಸ್ತಾನವನ್ನು ಭಾರತ ಜಗತ್ತಿನಲ್ಲಿ ಏಕಾಂಗಿಯಾಗಿ ಮಾಡಿದೆ. ಇಂಥಹ ಸಂದರ್ಭದಲ್ಲಿ ಭಾರತದಲ್ಲಿರುವ ಕೆಲವರು ಪಾಕಿಸ್ತಾನಕ್ಕೆ ಸಹಕಾರಿಯಾಗುವಂತೆ ಮಾತನಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ಆಪರೇಷನ್ ಸಿಂದೂರ ಹೆಸರಲ್ಲಿ ಕೇವಲ ನಾಲ್ಕು-ಐದು ವಿಮಾನ ಕಳುಹಿಸಿ ಭಾರತ ಸುಮ್ಮನಾಗಿದೆ ಎನ್ನುವ ಶಾಸಕ ಕೊತ್ತೂರು ಮಂಜುನಾಥ ಅವರು ಹೇಳಿಕೆಗೆ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇವರ ಹೇಳಿಕೆ ಪಾಕಿಸ್ತಾನದ ಭಾಷೆಯಾಗಿದೆ. ಕಾಂಗ್ರೆಸ್ ಯಾವಾಗಲೂ ಪಾಕಿಸ್ತಾನ ಭಾಷೆಯಂತೆ ಮಾತನಾಡುತ್ತದೆ ಎಂದು ಕಿಡಿಕಾರಿದರು.

ಹಿಂದೆ ಪಾಕಿಸ್ತಾನ ಹಿಂದೂ ಟೆರರ್ ಅಂದರೆ ಇಲ್ಲಿಯ ಕಾಂಗ್ರೆಸ್ ನಾಯಕರು ಅದನ್ನೇ ಬಳಸಿದರು. ೩೭೦ ಕಾಯ್ದೆ ತೆಗೆದಾಗ ಪಾಕಿಸ್ತಾನ ಬ್ಲ್ಯಾಕ್ ಡೇ ಎಂದಿತ್ತು. ಇವರು ಸಹ ಬ್ಲ್ಯಾಕ್ ಡೇ ಅಂದಿದ್ದರು. ಕಾಂಗ್ರೆಸ್‌ನ ಕೆಲವು ನಾಯಕರು ಈ ರೀತಿ ಮಾತನಾಡುತ್ತಿದ್ದು, ಕಾಂಗ್ರೆಸ್ ಮಾತನಾಡದಂತೆ ಸೂಕ್ತ ಎಚ್ಚರಿಕೆ ನೀಡಬೇಕು ಎಂದರು.

ಕಾಂಗ್ರೆಸ್ ಅನೇಕ ನಾಯಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ ಭಯೋತ್ಪಾದಕರ ಮನೆಗಳ ಟಾರ್ಗೆಟ್ ಮಾಡಿ ಹೊಡೆಯಲಾಗಿದೆ. ಭಾರತದ ಗುಪ್ತಚರ ಇಲಾಖೆ, ತಂತ್ರಜ್ಞಾನ, ಸೈನ್ಯ, ವಾಯುವ ಸೇನೆ, ಜಲ ಸೇನೆ ಸಮನ್ವದಿಂದ ಕಾರ್ಯಾಚರಣೆ ಮಾಡಿದ್ದು, ನಿಜಕ್ಕೂ ಮೆಚ್ಚುವಂತದ್ದು.

ಇದನ್ನು ಪಾಕಿಸ್ತಾನದವರು ಅಳುತ್ತ ಹೇಳುತ್ತಿದ್ದಾರೆ. ಭಾರತ ತಡೆಯಬೇಕು ಎಂದು ಅಮೇರಿಕದವರ ಕಾಲು ಬಿದ್ದಿದ್ದಾರೆ. ಆದರೆ ಭಾರತದಲ್ಲಿದ್ದ ಇವರಿಗೆ ಸೈನ್ಯದ ಮೇಲೆ ಅನುಮಾನವಿದೆ. ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್, ರಾಷ್ಟ್ರಪತಿ ಹಾಗೂ ಈಗ ಕೊನೆಗೆ ಸೈನ್ಯವನ್ನು ನಂಬುತ್ತಿಲ್ಲ. ಸೈನ್ಯದ ಅಽಕಾರಿಗಳು ಎಲ್ಲವನ್ನೂ ಸವಿಸ್ತಾರವಾಗಿ ಹೇಳಿದ್ದಾರೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!