ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣೆ ಬಂದ್ರೆ ಸಾಕು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಹೋಗುತ್ತಾರೆ ಎಂಬ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತಿಗೆ ನಿಖಿಲ್ ಕುಮಾರಸ್ವಾಮಿ ಭಾವುಕರಾಗಿದ್ದಾರೆ. ತಮ್ಮ ತಂದೆಯ ಸರ್ಜರಿ ಬಗ್ಗೆ ಮಾತನಾಡುವಾಗ ಭಾವುಕರಾಗಿ ಅದರ ಬಗ್ಗೆ ಬೇರೆಯವರು ಮಾತನಾಡುವ ಅಗತ್ಯವಿಲ್ಲ, ಆದರೆ ಅವರು ನಮ್ಮ ತಂದೆಯ ಸಮಸ್ಯೆಗಳ ಬಗ್ಗೆ ಮಾತನಾಡುವುದು ಸಹಜವಲ್ಲವೇ? ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಅವರ ಹಿರಿತನಕ್ಕೆ ಈ ಮಾತು ಒಳ್ಳೇದಲ್ಲ. ನಮ್ಮ ತಂದೆಯವರಿಗೆ ಆಗಿರುವ ಆಪರೇಷನ್ನ ಬಗ್ಗೆ ಇವರಿಗೆ ಪ್ರೂ ಮಾಡುವ ಅಗತ್ಯವಿಲ್ಲ. ಆಪರೇಷನ್ ಆಗಿದೆ ಎಂಬ ಅನುಕಂಪದಲ್ಲಿ ಮತ ಕರುಣಿಸಿ ಎಂದು ಕೇಳುವ ಅಗತ್ಯ ನಮಗೆ ಇಲ್ಲ. ಮೂರನೇ ಬಾರಿಗೆ ಅವರಿಗೆ ಹೃದಯದ ಶಸ್ತ್ರ ಚಿಕಿತ್ಸೆ ಆಗಿದೆ. ಇದನ್ನು ಸಾಬೀತು ಮಾಡುವ ಅವಶ್ಯಕತೆ ನಮಗೆ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.