ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್‌ನಲ್ಲಿ ಭದ್ರತಾ ಲೋಪದ ಬಗ್ಗೆಯೂ ರಾಜಕೀಯ ಮಾಡುತ್ತಿರುವುದು ವಿಷಾದನೀಯ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ಡಿ.13 ರಂದು ಸಂಸತ್‌ನಲ್ಲಿ ಭದ್ರತಾ ಉಲ್ಲಂಘನೆಯಾಗಿದೆ, ಇದು ಅತ್ಯಂತ ಗಂಭೀರ ಪ್ರಕರಣ ಇದರಲ್ಲಿಯೂ ರಾಜಕೀಯ ಮಾಡುತ್ತಿರುವುದು ಬೇಸರ ತಂದಿದೆ. ಅಮಿತ್ ಶಾ ಅವರು ಈ ಬಗ್ಗೆ ಮಾತನಾಡಬೇಕೆಂದು ವಿಪಕ್ಷಗಳು ಒತ್ತಾಯಿಸುತ್ತಿರುವುದು, ತಮ್ಮ ಲಾಭಕ್ಕೆ, ತಮ್ಮ ಬೇಡಿಕೆ ಈಡೇರಿಸುವಂಥ ಫಲಕ ಹಿಡಿದಿರುವುದು ಸದನದ ಘನತೆಯನ್ನು ಕಡಿಮೆ ಮಾಡುತ್ತದೆ ಎಂದಿದ್ದಾರೆ.
ಸದನದ ಘನತೆಯೊಂದಿಗೆ ಪ್ರಮುಖ ವಿಚಾರಗಳ ಚರ್ಚೆ ಮಾಡಬಹುದು, ಆದರೆ ಸದನದ ಬಾವಿಗೆ ನುಗ್ಗಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದಿದ್ದಾರೆ.