ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾತಿಗಣತಿ ವರದಿಯನ್ನು ಸಂಪೂರ್ಣವಾಗಿ ನೋಡದೇ ಸಮೀಕ್ಷೆ ಸರಿಯಿಲ್ಲ ಎಂದು ಹೇಳೋದು ಸರಿಯಲ್ಲ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಯಾವುದೇ ದೇಶಗಳಲ್ಲಿ ರಾಜಕೀಯವಾಗಿ ನ್ಯಾಯ ಕೊಡಬೇಕಾದರೆ ಒಂದು ಜಾತಿಗಣತಿ ಬೇಕು. ಜಾಸ್ತಿ ಇದೆ, ಕಡಿಮೆ ತೋರಿಸಿದ್ದಾರೆ ಎಂದು ಎಲ್ಲಾ ಸಮುದಾಯಗಳಿಗೆ ಭಿನ್ನಾಭಿಪ್ರಾಯ ಇದೆ. ಸರ್ಕಾರ ಇದರ ಬಗ್ಗೆ ಪರಿಶೀಲನೆ ಮಾಡುತ್ತದೆ. ವರದಿಯೇ ಜಾರಿ ಆಗಿಲ್ಲ. ಯಾರೇ ಸರ್ವೆ ಮಾಡಿದರೂ ಇಂತಹ ಅಸಮಾಧಾನ ಬರುತ್ತದೆ. ವರದಿ ನೋಡದೇ ವಿರೋಧ ಮಾಡೋದು ತಪ್ಪು ಎಂದು ತಿರುಗೇಟು ನೀಡಿದ್ದಾರೆ.