March 15, 2026
Sunday, March 15, 2026
spot_img

PARENTING | ಈ ಕೆಲಸಗಳನ್ನು ಮಾಡೋ ಪುಟಾಣಿಗಳು ಖುಷಿಯಾಗಿ, ಆರೋಗ್ಯವಾಗಿ ಇದಾರೆ ಅಂತ ಅರ್ಥ

ಮೂಲೆಗೆ ಸೇರಿಕೊಂಡು ಒಂಟಿಯಾಗಿ ಕುಳಿತುಕೊಂಡು ಒಂದೇ ವಸ್ತುವಿನ ಜೊತೆ ಸಮಯ ಕಳೆಯುವ ಮಕ್ಕಳಿಗಿಂತ ಎಲ್ಲರ ಜೊತೆ ಮಾತನಾಡುತ್ತಾ, ಮನೆಯೆಲ್ಲ ಮೇಲೆ ಕೆಳಗಿ ಮಾಡಿ, ದಾಂಧಲೆ ಮಾಡುವ ಮಕ್ಕಳು ಹೆಚ್ಚು ಆರೋಗ್ಯಕರವಂತೆ!

ಹೌದು, ನಿಮ್ಮ ಮಗು ಆರೋಗ್ಯವಾಗಿ, ಮಾನಸಿಕ ಹಾಗೂ ದೈಹಿಕವಾಗಿ ಗಟ್ಟಿಯಾಗಿದ್ಯಾ ಎಂದು ಹೀಗೆ ಪರೀಕ್ಷಿಸಿ..

ದೈಹಿಕವಾಗಿ..

ಉದ್ದ ಆಗ್ತಿದ್ದಾರಾ ಗಮನಿಸಿ, ಮೂರು ವರ್ಷದ ನಂತರ ಮಕ್ಕಳು ನಿಧಾನಕ್ಕೆ ತೂಕ ಹೆಚ್ಚಳ ಆಗುತ್ತಾರೆ. ಆದರೆ ಉದ್ದ ಆಗ್ತಾ ಇದ್ದಾರೆ ಗಮನಿಸಿ.

ಊಟ ಬೇಕು ಅಂತಾರೆ, ಊಟ ಮಾಡಿದ್ದು ಚೆನ್ನಾಗಿ ಜೀರ್ಣ ಆಗ್ತಿದೆ. ದಿನವೂ ಮಲವಿಸರ್ಜನೆ ಮಾಡ್ತಾರೆ.

ಚರ್ಮ ಸ್ಮೂತ್‌ ಆಗಿದೆ, ಮೆತ್ತಗಿದೆ. ಕೂದಲು ಡಲ್‌ ಆಗದೇ ಇದ್ರೆ ಅವರು ಆರೋಗ್ಯವಾಗಿದ್ದಾರೆ ಎಂದರ್ಥ.

ಯಾವಾಗಲೂ ಅತಿಯಾದ ಎನರ್ಜಿಯಿಂದ ಆಟ ಆಡೋದು, ಮೇಲೆ ಕೆಳಗೆ ಹಾರೋದು ಮಾಡ್ತಾರೆ.

ಮಗುವಿಗೆ ಸಮಯಕ್ಕೆ ಸರಿಯಾಗಿ ನಿದ್ದೆ ಬರ್ತಿದೆ ಅಂತಾದ್ರೆ ಎಲ್ಲವೂ ಸರಿ ಇದೆ ಎಂದರ್ಥ.

ಮಾನಸಿಕವಾಗಿ..

ಮಕ್ಕಳಿಗೆ ಎಲ್ಲ ವಿಷಯದ ಬಗ್ಗೆಯೂ ಕುತೂಹಲ ಇರಬೇಕು. ವಸ್ತುಗಳನ್ನು ಮುಟ್ಟುವುದು, ಏನಾಗ್ತಿದೆ ಎಂದು ಕೇಳುವುದು, ವಸ್ತುಗಳ ಜೊತೆ ಆಟ ಆಡೋದು ಒಳ್ಳೆಯದು.

ಜನರು, ನೆಂಟರ ಜೊತೆ ಮಗು ನಗುವುದು, ಐ ಕಾಂಟಾಕ್ಟ್‌ ಮಾಡುವುದು, ಮಾತನಾಡುವುದು ಉತ್ತಮ.

ಮಗು ಸುತ್ತಮುತ್ತ ಏನಾಗ್ತಿದೆ ಅನ್ನೋದನ್ನು ಗಮನಿಸುತ್ತದೆ, ಸೌಂಡ್‌ ಆದರೆ ತಿರುಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !