ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ವಿಧಾನಸಭೆ ಚುನಾವಣೆ ಹತ್ತಿರದಲ್ಲಿರುವಾಗಲೇ ಐಟಿ ದಾಳಿಗಳು ಸಂಚಲನ ಮೂಡಿಸುತ್ತಿವೆ. ಗುರುವಾರ ಬೆಳ್ಳಂ ಬೆಳಗ್ಗೆ ಹೈದರಾಬಾದ್‌ನ ಸುಮಾರು 10 ಪ್ರದೇಶಗಳಲ್ಲಿ ಐಟಿ ಅಧಿಕಾರಿಗಳಿಂದ ಶೋಧ ನಡೆಯುತ್ತಿದೆ.
ಕಾಂಗ್ರೆಸ್ ನಾಯಕಿ ಪಾರಿಜಾತ ನರಸಿಂಹ ರೆಡ್ಡಿ ಅವರ ಬಾಳಾಪುರ ನಿವಾಸದ ಮೇಲೆ ಐಟಿ ದಾಳಿ ನಡೆಯುತ್ತಿದೆ. ಬಡಂಗಪೇಟೆ ಮೇಯರ್ ಆಗಿರುವ ಪಾರಿಜಾತ ಮಹೇಶ್ವರಂ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದವರು. ಅದೇ ರೀತಿ ಮಹೇಶ್ವರಂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆಎಲ್‌ಆರ್ ನಿವಾಸದಲ್ಲೂ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಬೆಳಗ್ಗೆ 5 ಗಂಟೆಯಿಂದಲೇ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಪಾರಿಜಾತ ನರಸಿಂಹ ರೆಡ್ಡಿ ಕುಟುಂಬಸ್ಥರು ಹಾಗೂ ಸಂಬಂಧಿಕರ ಮನೆಗಳಲ್ಲಿ ಹತ್ತರಿಂದ ಹದಿನೈದು ತಂಡಗಳು ಶೋಧ ನಡೆಸುತ್ತಿವೆ. ಅಪಾರ ಪ್ರಮಾಣದ ಅನಧಿಕೃತ ಹಣ ಮತ್ತು ಚಿನ್ನಾಭರಣ ಇರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಈ ಶೋಧ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.