ಹೊಸ ದಿಗಂತ ಡಿಜಿಟಲ್ ಡೆಸ್ಕ್;
ಇಂಧನ ಸಚಿವ ಕೆಜೆ ಜಾರ್ಜ್ ಆಪ್ತರ ಒಡೆತನದ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ (IT Raids) ನಡೆಸಿದೆ.
ಜಾರ್ಜ್ ಆಪ್ತ ಜಿತೇಂದ್ರ ವಿರ್ವಾನಿ, ಜಿತು ವಿರ್ವಾನಿ ಒಡೆತನದ ಎಂಬೆಸಿ ಗ್ರೂಪ್ ಹಾಗೂ ಮತ್ತೊರ್ವ ಆಪ್ತರಾದ ಎಲೆಕ್ಟ್ರಿಕ್ ಗುತ್ತಿಗೆದಾರರಾಗಿರುವ ಕೊಠಾರಿ ಕಚೇರಿಗಳ ಮೇಲೆ ಐಟಿ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಮೂರು ದಿನದಿಂದ ಶೋಧ ನಡೆಸುತ್ತಿದ್ದಾರೆ ಅಂದ್ರೆ, ಲೆಕ್ಕಪತ್ರದಲ್ಲಿ ಏನೋ ವ್ಯತ್ಯಾಸಗಳು ಕಂಡುಬಂದಿರುವ ಸಾಧ್ಯತೆಗಳಿದ್ದು, ಅಂತಿಮವಾಗಿ ಏನೆಲ್ಲಾ ಆಗಲಿದೆ ಎನ್ನುವುದು ತಿಳಿದುಬರಬೇಕಿದೆ.