ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ, ನಿರೂಪಕಿ ಅಪರ್ಣಾ ನಿನ್ನೆ ಕ್ಯಾನ್ಸರ್‌ನಿಂದಾಗಿ ಕೊನೆಯುಸಿರೆಳೆದಿದ್ದಾರೆ. ಕೆಲ ವರ್ಷಗಳಿಂದ ಕ್ಯಾನ್ಸರ್‌ನಿಂದ ಹೋರಾಡುತ್ತಿದ್ದ ಅಪರ್ಣಾ ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಕಿರುತೆರೆ, ಹಿರಿತೆರೆಯಲ್ಲಿ ವರ್ಷಗಳಗಟ್ಟಲೆ ಮನರಂಜನೆ ನೀಡಿದ ಕಂಚಿನ ಕಂಠದ ಧ್ವನಿ ಇನ್ನು ಕೇಳುವುದಿಲ್ಲ ಎನ್ನುವ ವಿಷಯವನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.
ಅಪರ್ಣಾ ಬಹುಕಾಲದಿಂದ ಕನಸೊಂದನ್ನು ಹಾಗೇ ಉಳಿಸಿಕೊಂಡಿದ್ದರು. ಅವರಿಗೆ ಶಾಲೆಯೊಂದನ್ನು ತೆರೆಯುವ ಹೆಬ್ಬಾಸೆ ಇತ್ತು. ಈ ಬಗ್ಗೆ ಗೆಳೆಯರೊಂದಿಗೆ ಅಪರ್ಣಾ ಮಾತನಾಡಿದ್ದರು. ತಮ್ಮ ಜೀವನದಲ್ಲಿ ತಾವು ಕಂಡ ಕನಸುಗಳನ್ನು ಸಾಕಾರ ಮಾಡಿಕೊಂಡಿದ್ದಾರೆ. ಆದರೆ ಇದೊಂದು ಹಾಗೇ ಉಳಿದುಹೋಗಿದೆ..