ಜಿತೇಶ್ ಅಬ್ಬರದ ಆಟಕ್ಕೆ ಇವರದ್ದೇ ಮಾರ್ಗದರ್ಶನವಂತೆ! ಗೆಲುವಿನ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

LSG ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ ಅಮೋಘ ಆಟವಾಡಿ, ರೋಚಕ ಗೆಲುವಿನ ಮೂಲಕ ಆರ್‌ಸಿಬಿ ಪಾಯಿಂಟ್ ಟೇಬಲ್‌ನಲ್ಲಿ ಟಾಪ್ 2ನೇ ಸ್ಥಾನದೊಂದಿಗೆ ಪ್ಲೇಆಫ್‌ಗೆ ಅರ್ಹತೆ ಪಡೆದಿತ್ತು.

ನಿನ್ನೆ ನಡೆದ RCB ಹಾಗೂ LSG ನಡುವಿನ ಪಂದ್ಯದಲ್ಲಿ ಆರ್‌ಸಿಬಿಯ ಪರ ಆರ್ಭಟಿಸಿದ ಹಂಗಾಮಿ ನಾಯಕ ಜಿತೇಶ್ ಶರ್ಮಾ 33 ಎಸೆತಗಳಲ್ಲಿ 85 ರನ್ ಗಳಿಸಿ ಅಜೇಯರಾಗುಳಿದರು. ತಮ್ಮ ಈ ಸಾಧನೆಯನ್ನು ಮಾರ್ಗದರ್ಶಕ ದಿನೇಶ್ ಕಾರ್ತಿಕ್‌ಗೆ ಸಲ್ಲಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಕುರಿತು ಮಾತನಾಡಿದ ಜಿತೇಶ್ ಶರ್ಮಾ, ‘‘ನಾನು ಇಂತಹ ಇನ್ನಿಂಗ್ಸ್ ಆಡಿದ್ದೇನೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ನಾನು ಆ ಕ್ಷಣದಲ್ಲಿಯೇ ಇರಲು ಪ್ರಯತ್ನಿಸುತ್ತಿದ್ದೆ, ಹಿಂದೆ-ಮುಂದೆ ಯೋಚಿಸುತ್ತಿರಲಿಲ್ಲ.. ಕ್ರೀಸ್‌ನಲ್ಲಿಯೇ ಇರಲು ಪ್ರಯತ್ನಿಸುತ್ತಿದ್ದೆ. ನನ್ನ ಭಾವನೆಗಳನ್ನು ಈಗ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ’’ ಎಂದು ಹೇಳಿದರು. ಜೊತೆಗೆ ದಿನೇಶ್ ಕಾರ್ತಿಕ್ ಅವರನ್ನು ತಮ್ಮ ಗುರು ಎಂದು ಕರೆದಿದ್ದಲ್ಲದೆ, ಅವರನ್ನು ಮಾರ್ಗದರ್ಶಕ ಮತ್ತು ಅಣ್ಣ ಎಂದೂ ಸಹ ಕರೆದರು.

ಒಂದು ದಿನದ ನಂತರ ನಡೆಯಲಿರುವ ಕ್ವಾಲಿಫೈಯರ್ 1 ಪಂದ್ಯದ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ ‘‘ನಾನು ಈ ಕ್ಷಣವನ್ನು (ಗೆಲುವನ್ನು) ಈಗಲೇ ಆನಂದಿಸಲು ಪ್ರಯತ್ನಿಸುತ್ತೇನೆ. ನನ್ನ ಗುರು ದಿನೇಶ್ ಕಾರ್ತಿಕ್, ಪಂದ್ಯವನ್ನು ಕೊನೆಯವರೆಗೂ ತೆಗೆದುಕೊಂಡು ಹೋದರೆ, ತಂಡವನ್ನು ಗೆಲ್ಲಿಸುವ ಕೌಶಲ್ಯ ನನ್ನಲ್ಲಿದೆ’ ಎಂದು ಜಿತೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!