ಸ್ವಲ್ಪ ಖಾರ ಇದೆ ನನಗೆ ತಿಂದು ಅಭ್ಯಾಸ ಇಲ್ಲ, ಬೇಗ ಏಳೋ ಅಭ್ಯಾಸ ಇಲ್ಲ, ಬೇಗ ಸಿಟ್ಟು ಬಂದು ಬಿಡತ್ತೆ ಅದು ಅಭ್ಯಾಸ, ನನ್ನ ಬಾತ್‌ರೂಂನಲ್ಲೇ ಸ್ನಾನ ಮಾಡಿ ಅಭ್ಯಾಸ, ನಾನ್ ವೆಜ್ ತಿಂದಮೇಲೆ ಸಿಹಿ ತಿನ್ನೋದು ನಂಗೆ ಅಭ್ಯಾಸ.. ಹೀಗೆ ಎಲ್ಲವೂ ಅಭ್ಯಾಸ, ಎಲ್ಲದಕ್ಕೂ ಅಭ್ಯಾಸ..
ಈ ಅಭ್ಯಾಸ ಆಗಿದ್ದು ಹೇಗೆ? ಹೊಸ ಅಭ್ಯಾಸ ಮಾಡಿಕೊಳ್ಳೋದು ಹೇಗೆ? ಯಾವುದೇ ವಿಷಯ ಅಭ್ಯಾಸವಾಗಿ ಬದಲಾಗೋಕೆ 18-224 ದಿನಗಳು ಬೇಕಂತೆ! ಉದಾಹರಣೆಗೆ 18 ದಿನ ಬೆಳಗ್ಗೆ ಐದು ಗಂಟೆಗೆ ಎದ್ದು ನೋಡಿ, 19 ನೇ ದಿನ ನೀವಾಗೆ ಎದ್ದು ಬಿಡುತ್ತೀರಿ, ನಿಮ್ಮ ದೇಹ ಆಟೋಮ್ಯಾಟಿಕ್ ಆಗಿ ಎದ್ದು ಬಿಡುತ್ತದೆ. ಯಾವುದೇ ವಿಷಯವನ್ನು ಅಭ್ಯಾಸ ಮಾಡಿಕೊಳ್ಳೋದು ಹೀಗೆ..
- ಮೊದಲು ಮನಸ್ಸು ಮಾಡಿ, ಈ ವಿಷಯ ನನಗೆ ಅಭ್ಯಾಸ ಆಗಬೇಕು ಅಂತ ಮನಸ್ಸು ಮಾಡಿ. ಉದಾಹರಣೆಗೆ ದಿನವೂ ಪೇಪರ್ ಓದೊದು ನನಗೆ ಸಹಾಯ ಆಗುತ್ತದೆ, ಆದರೆ ಮಾಡೋಕೆ ಆಗ್ತಿಲ್ಲ. ಹೀಗಿದ್ದಾಗ ಇಷ್ಟವಿಲ್ಲದಿದ್ದರೂ ಬಿಡದೆ ಪೇಪರ್ ಓದಿ.
- ಸಮಯ ನೀಡಿ, ಮಾಡಬಹುದು, ಆದರೆ ಸಮಯ ಇಲ್ಲ ಎನ್ನುವ ಕೆಟಗರಿ ನಿಮ್ಮದಾಗಿದ್ದರೆ ನಿಮ್ಮ ಅಭ್ಯಾಸಕ್ಕೆ ಸಮಯ ನೀಡೋದನ್ನು ಮರೆಯಬೇಡಿ.
- ಗೀವ್ ಅಪ್ ಮಾಡಬೇಡಿ, ಜಿಮ್‌ಗೆ ಹೋಗೋಕೆ ಶುರು ಮಾಡಿದ್ದೀರಿ, ಆದರೆ ಬೆಳಗ್ಗೆ ಬೇಗ ಏಳೋಕೆ ಕಷ್ಟ ಆಗ್ತಿದೆ, ಆದರೆ ಗಿವ್ ಅಪ್ ಮಾಡದೇ ಎದ್ದು ನೋಡಿ, ಪ್ರತಿದಿನ ಬಿಡದೆ ಎದ್ದು ನೋಡಿ.. ಅದು ಮಾಮೂಲಿ ಅಭ್ಯಾಸ ಆಗಿಬಿಡುತ್ತದೆ.
- ರಿಯಲಿಸ್ಟಿಕ್ ಆಗಿಲ್ಲದ ಗೋಲ್ ಬೇಡ, ಸಣ್ಣ ಸಣ್ಣ ಗೋಲ್ ಇರಲಿ, ಒಂದೊಂದೇ ಸಣ್ಣ ಹೆಜ್ಜೆ ಇಡಿ.
- ಒಂದು ತಿಂಗಳು ಸ್ಕಿಪ್ ಮಾಡದೇ ನಿಮ್ಮ ರೊಟೀನ್ ಫಾಲೋ ಮಾಡಿ, ದಿನವೂ ನಾನು ಎಂಟು ಗಂಟೆಗೆ ತಿಂಡಿ ತಿನ್ತೇನೆ, ಒಂದು ದಿನ ಲೇಟಾದ್ರೆ ಆಗ್ಲಿ ಬಿಡು ಎನ್ನುವ ಉದಾಸೀನ ಬೇಡ, ಪ್ರತಿ ದಿನ ಅದೇ ಸಮಯಕ್ಕೆ ತಿಂಡಿ ತಿನ್ನಿ, ತಿಂಗಳ ನಂತರ ಅದೇ ಸಮಯಕ್ಕೆ ನಿಮ್ಮ ಹೊಟ್ಟೆ ಚುರುಕ್ ಎನ್ನುತ್ತದೆ.
- ಇಮ್ಯಾಜಿನ್ ಮಾಡಿ, ಬೆಳಗ್ಗೆ ಎದ್ದು ವಾಕ್ ಹೋಗುವ ಅಭ್ಯಾಸ ರೂಢಿಯಾದಾಗ ಏನೆಲ್ಲಾ ಬದಲಾವಣೆ ಆಗುತ್ತದೆ, ಆರೋಗ್ಯ ಚೆನ್ನಾಗಿರುತ್ತದೆ, ತೂಕ ಇಳಿಯುತ್ತದೆ ಹೀಗೆ ಲಾಭದ ಬಗ್ಗೆ ಯೋಚಿಸಿ