ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಯಿ ಬೊಗಳುವಿಕೆಯಿಂದ ಶುರುವಾದ ಜಗಳ ಭೀಕರ ಹಲ್ಲೆಯಾಗಿ ಮಾರ್ಪಟ್ಟ ಘಟನೆ ಅಂಟೋಪ್ ಹಿಲ್‌ನ ಪಂಜಾಬಿ ಕ್ಯಾಂಪ್ ರಾಜ್ ಹೈಟ್ಸ್ ಟವರ್‌ನಲ್ಲಿ ನಡೆದಿದೆ.
ಬಿಎಂಸಿ ನಲ್ಲಿ ನೈರ್ಮಲ್ಯ ಕೆಲಸಗಾರರಾ ನರೇಶ್ ಉದಯಭನ್ ಬಿಡ್ಲಾನ್, ಪತ್ನಿ ವಂದನಾ ಮತ್ತು 15 ವರ್ಷದ ಬಾಲಕ ಆರ್ಯನ್ ನೊಂದಿಗೆ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಿದ್ದರು. ಲಿಫ್ಟ್‌ಗಾಗಿ ಕಾಯುತ್ತಿದ್ದಾಗ, ನಾಯಿ ಒಂದಷ್ಟು ಜನ ಲಿಫ್ಟ್‌ನಿಂದ ಹೊರಬರುತ್ತಿದ್ದಾಗ ಬೊಗಳಿತು, ಇದು ಜಗಳಕ್ಕೆ ಕಾರಣವಾಯಿತು.
ಇದನ್ನೂ ಓದಿ: ಆರೋಗ್ಯಕ್ಕೆ ಬೆಸ್ಟ್, ನಾಲಗೆಗೂ ರುಚಿಯಾದ ಬಿಸಿ ಬಿಸಿ ಸಿಹಿಗೆಣಸಿನ ಪೆರಿ ಪೆರಿ ಫ್ರೈಸ್ ಇಂದೇ ಟ್ರೈ ಮಾಡಿ
ನಿತಿನ್ ಡಿಕ್ಕಾ ಎಂಬ ವ್ಯಕ್ತಿ ಸ್ಥಳಕ್ಕೆ ಆಗಮಿಸಿ ಬಿಡ್ಲಾನ್ ಮೇಲೆ ಮರದ ಕೋಲಿನಿಂದ ಹಲ್ಲೆ ನಡೆಸಿದ್ದಾನೆ ಇದರಿಂದ ತಲೆಗೆ ಗಂಭೀರ ಗಾಯಗಳಾಗಿವೆ. ಇದೆ ಸಂದರ್ಭದಲ್ಲಿ ಗುಂಪಿನಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಹುಡುಗನ ಬೆನ್ನಿಗೆ ಮತ್ತು ತೋಳಿಗೆ ಚಾಕುವಿನಿಂದ ಇರಿದಿದ್ದಾರೆ. ವಂದನಾ ಮೇಲೆ ಸಹ ಹಲ್ಲೆ ನಡೆದಿದ್ದು, ಅವರ ಮಂಗಳಸೂತ್ರ ಕೂಡ ತುಂಡಾಗಿದೆ ಎಂದು ದೂರಿದ್ದಾರೆ.
ಆಂಟೋಪ್ ಹಿಲ್ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ನಿತಿನ್, ತುಷಾರ್, ಸವಿತಾ, ಅಮನ್, ಕವಿತಾ ಮತ್ತು ಶರಣಜೀತ್ ವಿರುದ್ಧ ಬಿಎನ್‌ಎಸ್ ಮತ್ತು ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆಗಳಡಿ ಎಫ್‌ಐಆರ್ ದಾಖಲಾಗಿದೆ. ಗಾಯಗೊಂಡವರನ್ನು ಸಿಯಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

