September 27, 2026
Sunday, September 27, 2026
spot_img

ಕಾಂಗ್ರೆಸ್ ಕಚೇರಿಯಲ್ಲಿ ಹೋಳಿ ಹಬ್ಬದ ಸಂಭ್ರಮ: ಬಣ್ಣಗಳಲ್ಲಿ ಮಿಂದೆದ್ದ ರಾಹುಲ್ ಗಾಂಧಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಎಐಸಿಸಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೋಳಿ ಆಚರಿಸಿ ಸಂಭ್ರಮಿಸಿದರು.

ಈ ವೇಳೆ ಎಲ್ಲರಿಗೂ ಪ್ರೀತಿಯಿಂದ ತುಂಬಿದ ಮತ್ತು ದ್ವೇಷವನ್ನು ಹೋಗಲಾಡಿಸುವ ಹೋಳಿಯನ್ನು ಹಾರೈಸಿದ ರಾಹುಲ್ ಗಾಂಧಿ, ಎಲ್ಲರೂ ಖುಷಿಯಾಗಿ ಹಬ್ಬ ಆಚರಿಸಿ ಎಂದು ಹೇಳಿದರು.

ಬಣ್ಣಗಳು ಮತ್ತು ಪ್ರೀತಿಯ ಹಬ್ಬದ ಹೋಳಿ ಹಬ್ಬದಂದು ನಿಮ್ಮೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು. ಹೋಳಿಯ ಬಣ್ಣಗಳು ನಿಮ್ಮ ಜೀವನದಲ್ಲಿ ಹೊಸ ಭರವಸೆಗಳು, ಹೊಸ ಉತ್ಸಾಹ ಮತ್ತು ಅಸಂಖ್ಯಾತ ಸಂತೋಷವನ್ನು ತುಂಬಲಿ’ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೋಳಿ ಹಬ್ಬದಂದು ಜನರಿಗೆ ಶುಭಾಶಯ ಕೋರಿದ್ದು, ಹೋಳಿ ನಮ್ಮ ವರ್ಣರಂಜಿತ, ಬಹುಸಂಸ್ಕೃತಿ ಸಮಾಜದ ಆತ್ಮವನ್ನು ವ್ಯಕ್ತಪಡಿಸುವ ಹಬ್ಬವಾಗಿದೆ. ಇದು ಶತಮಾನಗಳಿಂದ ನಮ್ಮ ನಾಗರಿಕತೆಯ ವಿಶಿಷ್ಟ ಲಕ್ಷಣವಾಗಿರುವ ವೈವಿಧ್ಯತೆಯಲ್ಲಿ ಏಕತೆ, ಪರಸ್ಪರ ಸಾಮರಸ್ಯ ಮತ್ತು ಸಹೋದರತ್ವದ ಸಂಪ್ರದಾಯವನ್ನು ಆಚರಿಸುತ್ತದೆ’ ಎಂದು ಪೋಸ್ಟ್ ಮಾಡಿದ್ದಾರೆ.

Must Read