March 4, 2026
Wednesday, March 4, 2026
spot_img

ITF ಮಹಿಳಾ ಟೆನಿಸ್: ನಾಳೆ ಅಂಕಿತಾ ರೈನಾ, ಶ್ರೀವಲ್ಲಿ ಸೇರಿ ಸ್ಟಾರ್ ಆಟಗಾರ್ತಿಯರ ಜಿದ್ದಾಜಿದ್ದಿ

ಹೊಸದಿಗಂತ ಕಲಬುರಗಿ:

ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಐಟಿಎಫ್ ಡಬ್ಲ್ಯೂ 35 ಮಹಿಳಾ ಓಪನ್ ಟೆನಿಸ್ ಟೂರ್ನಿಯು ರೋಚಕ ಹಂತಕ್ಕೆ ತಲುಪಿದೆ. ನಾಳೆ (ಗುರುವಾರ) ನಡೆಯಲಿರುವ ನಾಲ್ಕು ಪ್ರಮುಖ ಡಬಲ್ಸ್ ಪಂದ್ಯಗಳು ಕ್ರೀಡಾಭಿಮಾನಿಗಳ ಕುತೂಹಲ ಕೆರಳಿಸಿವೆ.

ಪಂದ್ಯಗಳ ವಿವರ ಹೀಗಿದೆ:

ಕೋರ್ಟ್ 3: ಮಧ್ಯಾಹ್ನದ ನಂತರ ನಡೆಯಲಿರುವ ಮೊದಲ ಪಂದ್ಯದಲ್ಲಿ ಕ್ವಾಲಿಫೈರ್ ಜೋಡಿಯಾದ ಸೋನಾಲ್ ಪಾಟೀಲ್ ಮತ್ತು ಬೇಲಾ ತಮನ್ಕರ್ ಅವರು ಕರ್ನಾಟಕದ ಭರವಸೆಯ ಆಟಗಾರ್ತಿಯರಾದ ಸ್ನಿಗ್ಧಾ ಕಾಂತ ಹಾಗೂ ಹರ್ಷಿಣಿ ನಾಗರಾಜ್ ಸವಾಲನ್ನು ಎದುರಿಸಲಿದ್ದಾರೆ.

ಕೋರ್ಟ್ 1: ಇಲ್ಲಿನ ಪಂದ್ಯದಲ್ಲಿ ಶ್ರೀವಲ್ಲಿ ರಶ್ಮಿಕಾ ಭಾಮಿದಿಪಟಿ ಮತ್ತು ಜಸ್ಮಿನ್ ಗಿಂಬ್ರೇರ್ ಜೋಡಿಯು, ಆಕಾಂಕ್ಷಾ ದಿಲೀಪ್ ಹಾಗೂ ಸೋಹಾ ಸಾಧಿಕ್ ವಿರುದ್ಧ ಸೆಣಸಾಡಲಿದೆ.

ಕೋರ್ಟ್ 2: ಜೀಲ್ ದೇಸಾಯಿ ಮತ್ತು ಎಲಿನ ನೆಪ್ಲಿ ಅವರ ಜೋಡಿಯು ಶ್ರಾವ್ಯ ಶಿವಾನಿ ಹಾಗೂ ಮಿಚಿಕಾ ವೋಜೆಕಿ ವಿರುದ್ಧ ಪೈಪೋಟಿ ನಡೆಸಲಿದೆ.

ದಿನದ ಅಂತಿಮ ಪಂದ್ಯ (ಕೋರ್ಟ್ 3): ಟೂರ್ನಿಯ ಪ್ರಬಲ ಜೋಡಿಯಾದ ವೈಷ್ಣವಿ ಅಡ್ಕರ್ ಮತ್ತು ಅನುಭವಿ ಆಟಗಾರ್ತಿ ಅಂಕಿತ ರೈನಾ ಅವರು ಇವಗೇನಿ ಬರಡಿನಾ ಹಾಗೂ ಸೋಫಿಯಾ ಸಸ್ಲೋವಾ ಅವರ ಸವಾಲನ್ನು ಎದುರಿಸಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !