ಹೊಸದಿಗಂತ ಡಿಜಿಟಲ್ ಡೆಸ್ಕ್:
ಫಿಡೆ ಚೆಸ್ ವಿಶ್ವಕಪ್‌ನಲ್ಲಿ ಫೈನಲ್‌ಗೇರಿ ರನ್ನರ್ ಅಪ್ ಸ್ಥಾನ ಪಡೆದ ಭಾರತದ ಚೆಸ್ ಆಟಗಾರ ಆರ್ ಪ್ರಜ್ಞಾನಂದ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಚೆಸ್ ವಿಶ್ವಕಪ್‌ನಲ್ಲಿ ತಾವು ಗೆದ್ದ ಬೆಳ್ಳಿ ಪದಕವನ್ನು ಪ್ರಜ್ಞಾನಂದ ಹೆಮ್ಮೆಯಿಂದ ತೋರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಅವರ ತಂದೆ ರಮೇಶ್‌ಬಾಬು ಹಾಗೂ ತಾಯಿ ನಾಗಲಕ್ಷ್ಮೀ ಕೂಡ ಜೊತೆಯಲ್ಲಿದ್ದರು.
ಇನ್ನು ದೋಹಾದಿಂದ ಚೆನ್ನೈಗೆ ವಾಪಾಸ್ಸಾಗುವ ವೇಳೆಯಲ್ಲಿ ಇಂಡಿಗೋ ಸಿಬ್ಬಂದಿ, ಚೆಸ್ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ವಿನೂತನವಾಗಿ ಸ್ವಾಗತಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಇಂಡಿಗೋ, “ಚೆಸ್ ಕ್ರೀಡೆಯನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯದ ಭಾರತದ ಚೆಸ್ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ನಮ್ಮ ಜತೆ ಈ ಪಯಣದಲ್ಲಿ ಜತೆಯಾಗಿರುವುದು ನಮ್ಮ ಪಾಲಿಗೆ ಗೌರವದ ವಿಷಯ. ಚೆಸ್ ವಿಶ್ವಕಪ್ ಫೈನಲ್‌ಗೇರಿದ ಅತಿಕಿರಿಯ ಚೆಸ್ ಪಟು ಎನಿಸಿಕೊಂಡ ನಿಮಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದೆ.