ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರೆ ನಿಮಗೆ ಒಳ್ಳೆಯದು.. ಇಲ್ಲವಾದರೆ!: ನಕ್ಸಲರಿಗೆ ಅಮಿತ್‌ ಶಾ ಖಡಕ್ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಕ್ಸಲರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಅಭಿವೃದ್ಧಿಗೆ ಕೈಜೋಡಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕರೆ ನೀಡಿದ್ದಾರೆ.

ಛತ್ತೀಸಗಢದ ಬಸ್ತಾರ್‌ ಪ್ರದೇಶದ ಬುಡಕಟ್ಟು ಜನಾಂಗದವರ ಅಭಿವೃದ್ಧಿ ತಡೆಯಲು ನಕ್ಸಲರಿಗೆ ಸಾಧ್ಯವಿಲ್ಲ. ನಕ್ಸಲಿಸಂ ಅನ್ನು 2026ರ ಮಾರ್ಚ್‌ ಒಳಗಾಗಿ ಸಂಪೂರ್ಣವಾಗಿ ತೊಡೆದು ಹಾಕಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು.

ಶರಣಾಗತಿಯಾದವರು ಮುಖ್ಯವಾಹಿನಿಗೆ ಬರಲು ಮತ್ತು ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸರ್ಕಾರ ಸಹಾಯಹಸ್ತ ಚಾಚಲಿದೆ. ಶರಣಾಗತಿ ಆಗದ ನಕ್ಸಲರನ್ನು ಭಧ್ರತಾ ಪಡೆಗಳೇ ನೋಡಿಕೊಳ್ಳುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ ಶಾ, ಬಸ್ತಾರ್‌ನಲ್ಲಿ ಗುಂಡು ಹಾರಿಸುವುದು, ಬಾಂಬ್‌ಗಳನ್ನು ಸ್ಫೋಟಿಸುವ ದಿನಗಳು ಮುಗಿದಿವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!