March 24, 2026
Tuesday, March 24, 2026
spot_img

ಶಾಂತಿ ಕಾಪಾಡೋಕೆ ಪಾಕ್‌ ಮಧ್ಯಸ್ಥಿಕೆಯಂತೆ! ಇದನ್ನೇ ಹೇಳೋದು ನೋಡಿ ಭೂತದ ಬಾಯಲ್ಲಿ ಭಗವದ್ಗೀತೆ ಅಂತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಯುದ್ಧ ಪರಿಸ್ಥಿತಿಯ ನಡುವೆ ಜಾಗತಿಕ ಮಟ್ಟದಲ್ಲಿ ಶಾಂತಿ ಪ್ರಯತ್ನಗಳು ಚುರುಕುಗೊಂಡಿವೆ. ಈ ಹಿನ್ನೆಲೆ ಶೆಹಬಾಜ್ ಷರೀಫ್ ಪಾಕಿಸ್ತಾನವು ಶಾಂತಿ ಸ್ಥಾಪನೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧವಿದೆ ಎಂದು ಘೋಷಿಸಿದ್ದಾರೆ.

ಅವರು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಪ್ರದೇಶದ ಭದ್ರತೆ ಕುರಿತು ಚರ್ಚಿಸಿದ್ದಾರೆ. ಉದ್ವಿಗ್ನತೆ ತಗ್ಗಿಸಲು ಸಂವಾದ ಮತ್ತು ರಾಜತಾಂತ್ರಿಕ ಮಾತುಕತೆ ಅಗತ್ಯವೆಂದು ಇಬ್ಬರೂ ಒಪ್ಪಿಕೊಂಡಿದ್ದಾರೆ.

ಈ ವೇಳೆ ಪರ್ಷಿಯನ್ ಹೊಸ ವರ್ಷದ ಶುಭಾಶಯಗಳನ್ನೂ ವಿನಿಮಯ ಮಾಡಿಕೊಂಡಿದ್ದು, ಅಮೆರಿಕಾ ಹಾಗೂ ಇಸ್ರೇಲ್ ನಡುವಿನ ಸಂಘರ್ಷ ಶೀಘ್ರ ಅಂತ್ಯಗೊಳ್ಳಬೇಕು ಎಂಬ ಆಶಯವನ್ನೂ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ:

ಇರಾನ್ ವಿದೇಶಾಂಗ ವಕ್ತಾರರ ಪ್ರಕಾರ, ಯುದ್ಧ ಅಂತ್ಯಗೊಳಿಸಲು ಹಲವು ಸ್ನೇಹಪರ ರಾಷ್ಟ್ರಗಳು ಮಧ್ಯಸ್ಥಿಕೆ ಪ್ರಯತ್ನಿಸುತ್ತಿದ್ದು, ಪಾಕಿಸ್ತಾನವೂ ಪ್ರಮುಖ ಪಾತ್ರದಲ್ಲಿದೆ. ಇನ್ನೊಂದೆಡೆ, ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದರ್ ಇರಾನ್ ವಿದೇಶಾಂಗ ಸಚಿವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ, ಶಾಂತಿ ಮತ್ತು ಸ್ಥಿರತೆಯ ಅಗತ್ಯತೆಯನ್ನು ಒತ್ತಿಹೇಳಿದ್ದಾರೆ.

ಒಟ್ಟಿನಲ್ಲಿ, ಪ್ರಾದೇಶಿಕ ಉದ್ವಿಗ್ನತೆ ನಡುವೆ ಪಾಕಿಸ್ತಾನ ಸಮತೋಲನ ರಾಜತಾಂತ್ರಿಕ ನಿಲುವು ಅನುಸರಿಸಿ ಶಾಂತಿ ಸಾಧನೆಗೆ ಮುಂದಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !