April 15, 2026
Wednesday, April 15, 2026
spot_img

Viral | ‘ಧುರಂಧರ್’ ಎಫೆಕ್ಟ್ ಅನ್ಸುತ್ತೆ, ಪಾಕ್‌ನಲ್ಲಿ ಭಾರತದ ಸ್ಪೈಗಾಗಿ ಹುಡುಕಾಟ: ವಿಡಿಯೋ ಅಸಲಿಯತ್ತು ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ಕಥೆಗಳು ಕೆಲವೊಮ್ಮೆ ವಾಸ್ತವದಂತೆಯೇ ಕಾಣಿಸಿಕೊಳ್ಳುತ್ತವೆ. ಅದೇ ರೀತಿ ಧುರಂಧರ್ 2 ಸಿನಿಮಾ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದು, ಐದು ದಿನಗಳಲ್ಲಿ ಭಾರತದಲ್ಲಿ 500 ಕೋಟಿ ರೂ. ಗಳಿಕೆ ಮಾಡಿ ಸದ್ದು ಮಾಡುತ್ತಿದೆ. ಈ ಚಿತ್ರದ ಕಥೆಯಲ್ಲಿ ಭಾರತೀಯ ಗುಪ್ತಚರರು ಪಾಕಿಸ್ತಾನದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುವ ಹಿನ್ನೆಲೆ ಇದೆ.

ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಭಾರತೀಯ ಸ್ಪೈಗಳಿಗಾಗಿ ಶೋಧ ನಡೆಯುತ್ತಿದೆ ಎಂಬ ಹೇಳಿಕೆಯಿಂದ ಒಂದು ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಭದ್ರತಾ ಸಿಬ್ಬಂದಿ ರಸ್ತೆಬದಿಯಲ್ಲಿ ಮಲಗಿರುವವರನ್ನು ತಪಾಸಣೆ ಮಾಡುತ್ತಿರುವ ದೃಶ್ಯಗಳು ಕಾಣಿಸಿಕೊಂಡಿವೆ.

ಇದನ್ನೂ ಓದಿ:

ಆದರೆ, ಈ ವಿಡಿಯೋಗೆ ಸಂಬಂಧಿಸಿದ ನಿಜಸ್ಥಿತಿ ಬೇರೆ ಆಗಿದೆ. ಇದು ಇತ್ತೀಚಿನ ಘಟನೆ ಅಲ್ಲ ಎಂಬುದು ತಿಳಿದುಬಂದಿದ್ದು, ಕರಾಚಿಯ ಲಿಯಾರಿ ಪ್ರದೇಶದಲ್ಲಿ ನಡೆದ ಹಳೆಯ ಪೊಲೀಸ್ ಕಾರ್ಯಾಚರಣೆಯ ದೃಶ್ಯವಾಗಿರುವ ಸಾಧ್ಯತೆ ಇದೆ. ಇದೇ ರೀತಿಯ ಕ್ಲಿಪ್‌ಗಳು 2025ರಲ್ಲೇ ಹರಿದಾಡಿದ್ದವು ಎಂದು ಹೇಳಲಾಗುತ್ತಿದೆ.

ಇದರ ನಡುವೆ, ಈ ಚಿತ್ರ ಪಾಕಿಸ್ತಾನದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಆದರೂ ಪೈರಸಿ ಮೂಲಕ ಸಿನಿಮಾ ಅಲ್ಲಿನ ಪ್ರೇಕ್ಷಕರಿಗೆ ತಲುಪುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಒಟ್ಟಿನಲ್ಲಿ, ವೈರಲ್ ವಿಡಿಯೋಗೆ ಸಿನಿಮಾದೊಂದಿಗೆ ನೇರ ಸಂಪರ್ಕ ಇಲ್ಲದಿದ್ದರೂ, ಚಿತ್ರದ ಕಥೆ ಜನರಲ್ಲಿ ಕುತೂಹಲ ಹುಟ್ಟಿಸಿ ಚರ್ಚೆಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !