ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಹೊಸ ಇಂಟರ್ನ್ಯಾಷನಲ್ ಎಕ್ಸಿಬಿಷನ್-ಕಮ್-ಕನ್ವೆನ್ಷನ್ ಸೆಂಟರ್ ಆಗಿರುವ ‘ಭಾರತ ಮಂಟಪಂ’ ಅನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಅವರು, ಇವರು ಈ ಭಾರತ ಮಂಟಪವನ್ನು ನಿಲ್ಲಿಸಲು ಪ್ರಯತ್ನಿಸಿದರು, ಪ್ರತಿ ಕೆಲಸವನ್ನು ನಿಲ್ಲಿಸಲು ಒಬ್ಬರಲ್ಲಾ ಒಬ್ಬರು ಪ್ರಯತ್ನ ಮಾಡಿದರು. ಬ್ರೇಕಿಂಗ್ ನ್ಯೂಸ್‌ನಲ್ಲಿ, ಎಲ್ಲವನ್ನೂ ತೋರಿಸಿದರು. ಹಲವಾರು ಪ್ರಕರಣಗಳು ದಾಖಲಾಗಿವೆ. ಇನ್ನು ಕೆಲವೇ ದಿನಗಳು ಹೋಗಲಿ, ಅದೇ ವ್ಯಕ್ತಿಗಳು ತಮ್ಮ ಉಪನ್ಯಾಸಗಳಿಗೆ ಕಾರ್ಯಕ್ರಮಗಳಿಗೆ ಇದೇ ವೇದಿಕೆಗೆ ಬರುತ್ತಾರೆ. ಸ್ವಲ್ಪ ಸಮಯದ ನಂತರ, ಆ ಜನರು ಕೆಲವು ಉಪನ್ಯಾಸಗಳಿಗೆ, ಕಾರ್ಯಕ್ರಮಕ್ಕೆ ಇಲ್ಲಿಗೆ ಬರುತ್ತಾರೆ ಎಂದು ವಿಪಕ್ಷಗಳ ವಿರುದ್ಧ ಟೀಕಾಪ್ರಹಾರ ಮಾಡಿದರು.
ಈ ಕ್ಷಣ ನಾನು ಭಾರತದ ನಿವಾಸಿಗಳಿಗೆ ಒಂದು ಮಾತನ್ನು ಹೇಳಲು ಬಯಸುತ್ತೇನೆ. ನನ್ನ ಮೂರನೇ ಅವಧಿಯಲ್ಲಿ ಭಾರತವನ್ನು ವಿಶ್ವದ ಅತೀ ದೊಡ್ಡ ಮೂರು ಆರ್ಥಿಕತೆಯಲ್ಲಿ ಭಾರತದ ಹೆಸರು ಇರಲಿದೆ. ನನ್ನ ಸರ್ಕಾರದ ಮೂರನೇ ಅವಧಿಯಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ಹೆಮ್ಮೆಯಿಂದ ಎದ್ದು ನಿಲ್ಲಲಿದೆ. ಇದು ಮೋದಿಯ ಗ್ಯಾರಂಟಿ’ ಎಂದು ಹೇಳಿದರು.
ಕೆಲವರು ‘ಕರ್ತವ್ಯ ಪಥ’ ನಿರ್ಮಾಣವಾಗುತ್ತಿದ್ದಾಗ ಪತ್ರಿಕೆಗಳ ಮುಖಪುಟದಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಹಲವು ವಿಷಯಗಳು ರಾರಾಜಿಸುತ್ತಿದ್ದವು. ಕೋರ್ಟುಗಳಲ್ಲಿ ಕೂಡ ಇದರ ನಿರ್ಮಾಣದ ಪ್ರಶ್ನೆ ಮಾಡಿದ್ದರು. ಅದರ ನಿರ್ಮಾಣ ಪೂರ್ತಿಯಾದಾಗ ಇದೇ ಜನ ಚೆನ್ನಾಗಿದೆ ಎಂದಿದ್ದರು. ಈ ಟೋಲಿಗಳು, ಭಾರತ ಮಂಟಪ’ವನ್ನು ಒಪ್ಪಿಕೊಳ್ಳುತ್ತದೆ ಎನ್ನುವ ಖಾತ್ರಿ ನನಗೆ ಇದೆ. ಅವರು ಸೆಮಿನಾರ್‌ನಲ್ಲಿ ಉಪನ್ಯಾಸ ನೀಡಲು ಇಲ್ಲಿಗೆ ಬರುವ ಸಾಧ್ಯತೆಯೂ ಇದೆ ಎಂದು ಪ್ರಧಾನಿ ಹೇಳಿದರು.
5 ವರ್ಷಗಳಲ್ಲಿ 13.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಭಾರತದಲ್ಲಿ ಕಡು ಬಡತನ ಕೊನೆಗೊಳ್ಳುವ ಹಂತದಲ್ಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳೂ ಹೇಳುತ್ತಿವೆ. ಕಳೆದ 9 ವರ್ಷಗಳಲ್ಲಿ ಕೈಗೊಂಡ ನಿರ್ಧಾರಗಳು ಮತ್ತು ನೀತಿಗಳು ದೇಶವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುತ್ತಿವೆ ಎಂಬುದನ್ನು ಇದು ತೋರಿಸುತ್ತದೆ ಎಂದರು.
ಮುಂದಿನ ದಿನ ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯವನ್ನು ದೆಹಲಿಯಲ್ಲಿ ನಿರ್ಮಿಸಲಾಗುವುದು ಎಂದು ಪ್ರಧಾನಿ ಮೋದಿ ಅವರು ಹೇಳಿದರು.