ಹೆಣ್ಣುಮಕ್ಕಳಿಗೆ birthday gift ಕೊಡುವಾಗ, ಅದರಲ್ಲಿ ಪ್ರೀತಿ ಮತ್ತು ಸ್ಪೆಷಲ್ ಅರ್ಥ ಇರಬೇಕು. ಅವರು ತಾವು ಯಾರು, ಯಾವುದನ್ನು ಇಷ್ಟಪಡುತ್ತಾರೆ ಎನ್ನುವುದನ್ನು ಪರಿಗಣಿಸಿ ಕೊಡುವ ಗಿಫ್ಟ್‌ಗಳು ಹೆಚ್ಚು ಮೌಲ್ಯವಿರುತ್ತವೆ. ಇಲ್ಲಿ ಕೆಲವೊಂದು ಅರ್ಥಪೂರ್ಣ birthday gift ಐಡಿಯಾ ಇದೆ ನಿಮಗೆ ಯಾವುದು ಇಷ್ಟ್ಟವಾಗುತ್ತೋ ನೋಡಿ.
Personalized Gifts – ವೈಯಕ್ತಿಕ ಸ್ಪರ್ಶ
ಅವರ ಹೆಸರಿರುವ ಕಪ್, ಟೀ ಶರ್ಟ್ ಅಥವಾ ಫೋಟೋ ಫ್ರೇಮ್‌ನಂತೆ ಪರ್ಸನಲೈಸ್ ಮಾಡಿದ ಉಡುಗೊರೆಗಳು ಹೆಚ್ಚು ಪ್ರೀತಿಪಾತ್ರವಾಗುತ್ತವೆ. ಇದರಿಂದ ಅವರಿಗೆ ಈ ಉಡುಗೊರೆ ನಿಜಕ್ಕೂ ವಿಶೇಷವಾಗಿದೆ ಎಂಬ ಭಾವನೆ ಬರೋದು ಪಕ್ಕಾ.
Skincare & Self-care Kits – ತಮಗೆ ಕಾಳಜಿಯ ಉಡುಗೊರೆ
ಫೇಸ್ ಮಾಸ್ಕ್, ಬಾಡಿ ಲೋಶನ್, ಲಿಪ್ ಬಾಮ್, ಪರಫ್ಯೂಮ್ ಇತ್ಯಾದಿ ಒಳಗೊಂಡ ಕ್ಯೂಟ್ ಬ್ಯೂಟಿ ಕಿಟ್‌ಗಳು ಹೆಣ್ಣು ಮಕ್ಕಳಿಗೆ ಬಹಳ ಇಷ್ಟ ಅಲ್ವಾ. ಹೀಗಾಗಿ ಇದೆ ರೀತಿಯ ಅವರು ಬಳಸೋ Skincare ಪ್ರಾಡಕ್ಟ್ಸ್ ಕೊಡಬಹುದು.
Jewelry – ಸಿಂಪಲ್ ಅಥವಾ ಸ್ಟೈಲಿಷ್ ಚಿನ್ನದ/ಆಕ್ಸಿಡೈಜ್ಡ್ ಆಭರಣ
ಚೈನ್, ಉಂಗುರ, ಬ್ರೇಸ್ಲೈಟ್ ಅಥವಾ ಇಯರ್ ರಿಂಗ್ಸ್ ಹೀಗೆ ಸಣ್ಣದಾದರೂ ವಿಶಿಷ್ಟವಾದ ಆಭರಣಗಳು ಅವಳ ದಿನದ ಖುಷಿಯನ್ನು ಡಬ್ಬಲ್ ಮಾಡುತ್ತವೆ.
Cute Stationery – ಕಲರ್‌ಫುಲ್ ಪೆನ್ಸ್, ಡೈರಿಗಳು
ಪಾಪ್ ಕಲರ್ ನೋಟು ಪುಸ್ತಕಗಳು, ಪೆನ್‌ಗಳು, ಸ್ಟಿಕರ್‌ಗಳು ಇತ್ಯಾದಿ, ವಿದ್ಯಾರ್ಥಿನಿ ಅಥವಾ ಬರಹ ಪ್ರಿಯರಿಗೆ ಪರ್ಫೆಕ್ಟ್ ಗಿಫ್ಟ್!
Experience Gift – ಒಂದು ದಿನದ outing, movie ticket ಅಥವಾ spa voucher
ಮೆಮೊರೇಬಲ್ ಅನುಭವ ಉಡುಗೊರೆಗಿಂತ ಹೆಚ್ಚು. ಅವಳಿಗೆ ಇಷ್ಟವಾದ ಸಿನೆಮಾದ ಟಿಕೆಟ್‌ಗಳು, ಕಾಫಿ ಔಟಿಂಗ್ ಅಥವಾ ರಿಲ್ಯಾಕ್ಸ್ ಆಗೋ ಸ್ಪಾ ವೌಚರ್ ನೀಡಿದರೆ unforgettable ಆಗಿರುತ್ತೆ.
ಉಡುಗೊರೆ ಏನೇ ಆಗಿರಲಿ, ಒಂದು ಪ್ರೀತಿಯಿಂದ ಬರೆದ ಮೆಸೇಜ್ ನೋಟ್ ಜೊತೆಗೆ ಕೊಟ್ಟರೆ ಅದು ಅವಳಿಗೆ ಜಗತ್ತಿನ ಅತ್ಯುತ್ತಮ ಉಡುಗೊರೆ ಆಗಬಹುದು!