ಇದು ಮತʼದಾನʼ ಅಲ್ಲ, ಮತ ʼಹಕ್ಕುʼ ಚಲಾವಣೆ: ರಾಘವೇಂದ್ರ ರಾಜ್‌ಕುಮಾರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಡಾ.ರಾಜ್ ಕುಟುಂಬದ ಅನೇಕ ಸದಸ್ಯರು ಒಟ್ಟಾಗಿಯೇ ಬಂದು ಮತ ಚಲಾಯಿಸಿದ್ದಾರೆ.

ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ,  ಇದು ಮತದಾನ ಅಲ್ಲ, ಮತವನ್ನು ದಾನ ಮಾಡಬೇಡಿ. ಅದು ನಮ್ಮ ಹಕ್ಕು, ಹಕ್ಕನ್ನು ಎಲ್ಲರೂ ಚಲಾಯಿಸಿ ಎಂದರು. ಈ ಹಿಂದೆ ಅಪ್ಪ ಅಮ್ಮನ ಜೊತೆ ಬಂದು ವೋಟು ಮಾಡುತ್ತಿದ್ದೆವು. ಆಮೇಲೆ ಅಪ್ಪು ಜೊತೆ ಬಂದೆ ಈಗ ಒಬ್ಬನೇ ಬಂದಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾಘವೇಂದ್ರ ರಾಜ್ ಕುಮಾರ್ , ಪತ್ನಿ ಮಂಗಳ ರಾಘವೇಂದ್ರ ರಾಜ್ ಕುಮಾರ್, ಮಕ್ಕಳಾದ ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಒಟ್ಟಾಗಿ ಬಂದು ಮತದಾನ  ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!