ಹೊರಗೆ ಕ್ರಿಸ್ಪಿ, ಒಳಗೆ ಮೃದುವಾದ ಪನೀರ್ ತುಂಡುಗಳು, ವೈವಿಧ್ಯಮಯ ಭಾರತೀಯ ಮಸಾಲೆಗಳ ಮಿಶ್ರಣದಿಂದ ತಯಾರಾಗುವ ಪನೀರ್ 65, ಸಂಜೆಯ ಸ್ನ್ಯಾಕ್ಸ್ ಆಗಿ ಜನಪ್ರಿಯವಾದ ತಿಂಡಿ. ಸ್ಟಾರ್ಟರ್ ಅಥವಾ ಸೈಡ್ ಡಿಶ್ ಆಗಿ ಉಪಯೋಗಿಸುವ ಈ ರೆಸಿಪಿ ಚಟ್ನಿ ಅಥವಾ ಟೊಮೆಟೋ ಸಾಸ್ ಜೊತೆಗೆ ಸವಿಯಲು ಸೂಕ್ತ.
ಬೇಕಾಗುವ ಸಾಮಗ್ರಿಗಳು
20 ಪನೀರ್ ತುಂಡುಗಳು
1 ಟೀಸ್ಪೂನ್ ಮೆಣಸಿನ ಪುಡಿ
¼ ಟೀಸ್ಪೂನ್ ಅರಿಶಿನ
½ ಟೀಸ್ಪೂನ್ ಗರಂ ಮಸಾಲ
½ ಟೀಸ್ಪೂನ್ ಉಪ್ಪು
3 ಚಮಚ ಮೊಸರು
1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
3 ಚಮಚ ಜೋಳದ ಹಿಟ್ಟು
ಕರಿಯಲು ಎಣ್ಣೆ
ಸಾಸ್‌ಗಾಗಿ:
2 ಚಮಚ ಎಣ್ಣೆ
ಹಿಂಗ್
1 ಇಂಚಿನ ಶುಂಠಿ
5 ಬೆಳ್ಳುಳ್ಳಿ ಎಸಳುಗಳು
2 ಮೆಣಸಿನಕಾಯಿಗಳು
2 ಒಣಗಿದ ಕೆಂಪು ಮೆಣಸಿನಕಾಯಿಗಳು
2 ಚಮಚ ಟೊಮೆಟೊ ಸಾಸ್
½ ಟೀಸ್ಪೂನ್ ಮೆಣಸಿನ ಪುಡಿ
½ ಟೀಸ್ಪೂನ್ ಉಪ್ಪು
½ ಟೀಸ್ಪೂನ್ ಚಾಟ್ ಮಸಾಲ
ಕೆಲವು ಕರಿಬೇವು ಎಲೆಗಳು
ಮಾಡುವ ವಿಧಾನ
ಮೊದಲು, ಒಂದು ಬಟ್ಟಲಿನಲ್ಲಿ ಪನೀರ್ ತುಂಡುಗಳನ್ನು ತೆಗೆದುಕೊಂಡು, 1 ಟೀಸ್ಪೂನ್ ಮೆಣಸಿನ ಪುಡಿ, ¼ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಗರಂ ಮಸಾಲ ಮತ್ತು ½ ಟೀಸ್ಪೂನ್ ಉಪ್ಪು, 3 ಚಮಚ ಮೊಸರು, 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು 3 ಚಮಚ ಕಾರ್ನ್ ಫ್ಲೋರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈ ಪನೀರ್ ತುಂಡುಗಳನ್ನು ಬಿಸಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ, ಪನೀರ್ ಕಂದು ಬಣ್ಣಕ್ಕೆ ತಿರುಗುವವರೆಗೆ ಫ್ರೈ ಮಾಡಿ.
ಒಂದು ಪ್ಯಾನ್ ನಲ್ಲಿ 2 ಟೇಬಲ್ ಸ್ಪೂನ್ ಎಣ್ಣೆ ಬಿಸಿ ಮಾಡಿ, ಒಂದು ಚಿಟಿಕೆ ಉಪ್ಪು, 1 ಇಂಚು ಶುಂಠಿ, 5 ಬೆಳ್ಳುಳ್ಳಿ ಎಸಳು, 2 ಮೆಣಸಿನಕಾಯಿ ಮತ್ತು 2 ಒಣಗಿದ ಕೆಂಪು ಮೆಣಸಿನಕಾಯಿ, ಕರಿಬೇವು ಎಲೆ ಸೇರಿಸಿ ಚೆನ್ನಾಗಿ ಹುರಿಯಿರಿ. ಅದಕ್ಕೆ 2 ಚಮಚ ಟೊಮೆಟೊ ಸಾಸ್, ½ ಚಮಚ ಮೆಣಸಿನ ಪುಡಿ, ½ ಚಮಚ ಉಪ್ಪು, ½ ಚಮಚ ಚಾಟ್ ಮಸಾಲ ಸೇರಿಸಿ ಸಾಸ್ ಸ್ವಲ್ಪ ಫ್ರೈ ಮಾಡಿ. ಇದಕ್ಕೆ ಫ್ರೈ ಮಡಿದ ಪನ್ನೀರ್ ತುಂಡು ಸೇರಿಸಿದರೆ ಪನೀರ್ 65 ರೆಡಿ.