ಜನಿವಾರ ತೆಗೆಸಿದ್ದು ದುಃಖ ತಂದಿದೆ: ವಿದ್ಯಾರ್ಥಿ ಶ್ರೀಪಾದ ಪಾಟೀಲ್ ಅಳಲು

ಹೊಸದಿಗಂತ ವರದಿ ,ಕಲಬುರಗಿ:

ನೀಟ್ ಪರೀಕ್ಷೆ ವೇಳೆ ಜನಿವಾರ ತೆಗೆಯುವಂತೆ ಹೇಳಿದ್ದು, ಮನಸ್ಸಿಗೆ ಅತೀ ದುಃಖ ತಂದಿದೆ ಎಂದು ನೀಟ್ ಪರೀಕ್ಷೆ ಬರೆಯಲು ಬಂದಿದ್ದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬೇಟ್ ಬಾಲಕುಂದಾ ಗ್ರಾಮದ ವಿದ್ಯಾರ್ಥಿ ಶ್ರೀಪಾದ ಸುಧೀರ್ ಪಾಟೀಲ್ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

ಪರೀಕ್ಷೆಯ ನಂತರ ಜನಿವಾರ ತೆಗೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆ ಬರೆಯಲು ಒಳಗಡೆ ಹೋಗುವಾಗ ಪರೀಕ್ಷಾ ಕೇಂದ್ರದ ಅಧಿಕಾರಿಗಳು ನಿಮ್ಮಲ್ಲಿ ಏನಾದರೂ ಇದ್ದರೆ ತೆಗೆದುಬಿಡಿ ಅಂತ ಹೇಳಿದ್ದಾರೆ.ಆಗ ನಾನು ಜನಿವಾರ ಇದೆ ಅಂತ ಹೇಳಿದಾಗ ಅದು ತೆಗೆದರೆ ಮಾತ್ರ ಪರೀಕ್ಷೆಗೆ ಅವಕಾಶ ಎಂದು ಹೇಳಿ ತೆಗೆಸಿದ್ದಾರೆ ಎಂದು ಹೇಳಿದರು.

ಪರೀಕ್ಷೆ ನಷ್ಟವಾಗಬಾರದು ಎಂಬ ಕಾರಣಕ್ಕೆ ನಾನು ಜನಿವಾರವನ್ನು ತೆಗೆದು ತಂದೆಯವರಿಗೆ ಕೊಟ್ಟು,ಪರೀಕ್ಷಾ ಕೇಂದ್ರದ ಒಳಗಡೆ ಹೋಗಿದ್ದೇನೆ. ಜನಿವಾರ ತೆಗೆದಿದ್ದರಿಂದ ನಿರಾಸೆಯುಂಟಾಗಿದೆ.ಈ ನಿರಾಸೆಯಲ್ಲಿ ನಾನು ನನ್ನ ರೋಲ್ ನಂಬರ್ ಕೂಡ ತಪ್ಪಾಗಿ ಬರೆದಿದ್ದೇನೆ.ನನ್ನ ರೋಲ್ ನಂಬರ್ ೮೨೪೨ ಬರೆಯಬೇಕಾಗಿತ್ತು.ಆದರೆ, ೮೨೩೨ ಎಂದು ತಪ್ಪಾಗಿ ಬರೆದು ಬಂದಿದ್ದೇನೆ ಎಂದ ವಿದ್ಯಾರ್ಥಿ, ನನಗೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

  1. ಇವರಿಗೆ ಶಿಕ್ಷಣ ಭವಿಷ್ಯಕ್ಕಿಂತ ಜನಿವಾರ ಮುಖ್ಯ ಆಯ್ತು,,, ಮುಂದೆ ದೇಶಕ್ಕಿಂತ ಜನಿವಾರ ಮುಖ್ಯ,,, ಹೀಗೆ ದೇಶವನ್ನು ಮತ್ತೊಮ್ಮೆ ಪುರಾಣ ಕಾಲಕ್ಕೆ ತಳ್ಳಿ ತಾವು ವಿದೇಶಗಳಲ್ಲಿ ನೌಕರಿ ಮಾಡಿಕೊಂಡು ಮಜಾ ಮಾಡುವರು

  2. ಅಂದು ಹೆಣ್ಣುಮಕ್ಕಳ ನಖಾಬ್ ಬಿಚ್ಚಿದಾಗ ಅದೆಷ್ಟು ಹಿತವಾಗಿತ್ತು. ಇಂದು ಮಾತ್ರ ನೋವಾಗುತ್ತಿದೆ ಅಲ್ವೇ? ಇದಕ್ಕೆ ಹೇಳುವುದು ಕರ್ಮ ಅಂತ.

LEAVE A REPLY

Please enter your comment!
Please enter your name here

error: Content is protected !!