ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ದೇಶವೇ ವರ್ಷಗಟ್ಟಲೆ ಕಂಡ ಕನಸು ಇನ್ನೇನು ಕೆಲವೇ ಹೊತ್ತಿನಲ್ಲಿ ನನಸಾಗಲಿದೆ.
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರಲ್ಲಿ ಇಂದು ಶ್ರೀರಾಮಲಲಾನ ಪ್ರಾಣಪ್ರತಿಷ್ಠೆಯಾಗಲಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳು ಭಕ್ತವೃಂದ ಕಾಯುತ್ತಿದೆ.
ಕರ್ನಾಟಕದಲ್ಲಿಯೂ ಸಂಭ್ರಮ ಮನೆ ಮಾಡಿದ್ದು, ಪ್ರತೀ ಮನೆಯಲ್ಲಿಯೂ ಹಬ್ಬದ ವಾತಾವರಣ ಕಾಣಿಸಿದೆ. ಮನೆಯ ಮುಂದೆ ರಾಮನ ರಂಗೋಲಿ, ದೇವರಿಗೆ ವಿಶೇಷ ಪೂಜೆ, ದೇಗುಲಗಳಲ್ಲಿ ಭಜನ ಪಠಣೆ, ವಿಶೇಷ ಪೂಜೆ, ಸಾವಿರ ದೀಪ ಹಚ್ಚುವುದು, ಹೋಮ ಹವನ ಹೀಗೆ..
ರಾಜಧಾನಿ ಬೆಂಗಳೂರಿನಲ್ಲಿ ಸೀತಾ ರಾಮ ದೇಗುಲವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಸೀತಾ, ರಾಮ, ಲಕ್ಷ್ಮಣ ಹಾಗೂ ಆಂಜನೇಯ ದೇಗುಲ ಇದಾಗಿದೆ. ಹಿರಂಡಳ್ಳಿಯಲ್ಲಿ 32 ಅಡಿ ಎತ್ತರದ ಹನುಮಾನ್ ವಿಗ್ರಹ ಇರುವ ದೇಗುಲ ಇಂದು ಲೋಕಾರ್ಪಣೆಯಾಗಲಿದೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಇಂದು ರಾಮಲಲಾ ಪ್ರಾಣಪ್ರತಿಷ್ಠೆ ಹಿನ್ನೆಲೆ ಅದ್ಧೂರಿ ಅಲಂಕಾರ ಮಾಡಲಾಗಿದೆ. ಅಂಜನಾದ್ರಿ ಬೆಟ್ಟದಲ್ಲಿ ಇಂದು ರಾಮನ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ.
ರಾಮನ ರಂಗೋಲಿ, ರಾಮನ ಟ್ಯಾಟೂ, ರಾಮನ ಬ್ಯಾನರ್‌ಗಳು ಇಡೀ ಕರ್ನಾಟಕದಲ್ಲಿ ರಾರಾಜಿಸುತ್ತಿವೆ. ಸಾಮಾಜಿಕ ಜಾಲತಾಣದಲ್ಲಿಯೂ ಎಲ್ಲರ ಸ್ಟೇಟಸ್, ಡಿಪಿ ಹಾಗೂ ರಾಮನ ಪೋಸ್ಟ್‌ಗಳು ಕಾಣಿಸುತ್ತವೆ.