ಇವನೇನಾ ಆಧುನಿಕ ಬಾಹುಬಲಿ: ಕೆರೆಯಂತಾದ ರಸ್ತೆಯಲ್ಲಿ ಹೆಗಲ ಮೇಲೆ ಬೈಕ್ ಹೊತ್ತು ಸಾಗಿದನು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿದೆಡೆ ಉತ್ತಮ ಮಳೆಯಾಗುತ್ತಿದ್ದು, ರಾಯಚೂರಿನಲ್ಲೂ ಎಡೆಬಿಡದೆ ಬಂದ ಮಳೆಯಿಂದ ರಸ್ತೆಗಳು ಕೆರೆಯಂತಾಗಿದೆ.

ಹೀಗಾಗಿ ಇಲ್ಲೊಬ್ಬ ಸವಾರ ಮೊನಕಾಲಷ್ಟು ನಿಂತ ನೀರಲ್ಲಿ ಹೆಗಲ ಮೇಲೆ ಬೈಕ್ ಹೊತ್ತು ಸಾಗಿರುವ ವಿಡಿಯೋ ವೈರಲ್‌ (Video Viral) ಆಗಿದೆ.

ರಾಯಚೂರಿನ ಕರೇಕಲ್ ಗ್ರಾಮದಲ್ಲಿ ಕಳೆದೆರಡು ದಿನಗಳಿಂದ ಸುರಿದ ವ್ಯಾಪಕ ಮಳೆಗೆ ರೈಲ್ವೇ (Railway) ಅಂಡರ್‌ಪಾಸ್‌ನಲ್ಲಿ ನೀರು ತುಂಬಿ ಕೆರೆಯಂತಾಗಿದ್ದರಿಂದ ಸವಾರನೊಬ್ಬ ಸಿನಿಮಾ ಶೈಲಿಯಲ್ಲಿ ಬೈಕ್ (Bike) ಹೊತ್ತುಕೊಂಡುನಡೆದಿದ್ದಾನೆ.

ಡ್ರೈನೇಜ್‌ ಕಟ್ಟಿಕೊಂಡಿದ್ದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆ ತುಂಬೆಲ್ಲಾ ನಿಂತುಕೊಂಡಿತ್ತು. ಇದರಿಂದಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸಬೇಕಾಯಿತು.

ನಿಂತ ನೀರಲ್ಲಿ ಬೈಕ್ ಸಾಗದ ಹಿನ್ನೆಲೆ ಸವಾರನೊಬ್ಬ ಹೆಗಲ ಮೇಲೆ ಎಚ್‌ಎಫ್‌ ಡಿಲಕ್ಸ್‌ ಬೈಕ್‌ಅನ್ನೇ ಹೊತ್ತು ಅಂಡರ್‌ಪಾಸ್‌ ದಾಟ್ಟಿದ್ದಾರೆ. ಬೈಕ್ ಹೊತ್ತು ಸಾಗುವ ವಿಡಿಯೊವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಇದು ವೈರಲ್‌ ಆಗುತ್ತಿದ್ದು, ಯಾರಪ್ಪ ಇದು ಆಧುನಿಕ ಬಾಹುಬಲಿ ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

ಎಷ್ಟೋ ಬೈಕ್ ಸವರಾರು ಈ ಮಾರ್ಗದಲ್ಲಿ ಸಂಚರಿಸುವುದನ್ನೇ ನಿಲ್ಲಿಸಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!