ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ವಿರುದ್ಧ ಎರಡನೇ ಟೀ20 ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಸರಣಿಯಲ್ಲಿ ಭಾರತ 2-0 ಅಂತರದಿಂದ ಗೆಲುವು ದಾಖಲಿಸಿದೆ.
ಶ್ರೀಲಂಕಾ ನೀಡಿದ 184 ರನ್ಗಳ ಗುರಿಯನ್ನು ಬೆನ್ನತ್ತಿದ್ದ ಭಾರತಕ್ಕೆ ನಾಯಕ ರೋಹಿತ್ ಶರ್ಮ ನಿರಾಸೆ ಮೂಡಿಸಿದರು. ಇಶಾನ್ ಕಿಶನ್ 16 ರನ್ ಗಳಿಸಿ ಔಟಾದರು. ಈ ವೇಳೆ ಉತ್ತಮ ಆಟವಾಡಿದ ಶ್ರೇಯಸ್ ಆಯ್ಯರ್ ಅಮೋಘ ಬ್ಯಾಟಿಂಗ್ ಮೂಲಕ ಲಂಕಾ ಬೌಲರ್ ಗಳನ್ನು ಬೆನ್ನಟ್ಟಿದರು. 44 ಬಾಲ್ ನಲ್ಲಿ 74 ರನ್ ಗಳಿಸಿ ಭಾರತದ ಗೆಲುವಿಗೆ ಕಾರಣವಾದರು. ಇವರಿಗೆ ಸಾಥ್ ನೀಡಿದ ಸಂಜು ಸ್ಯಾಮ್ಸನ್ 39 ರನ್ ಗಳಿಸಿದರೆ. ಅಂತಿಮ ಹಂತದಲ್ಲಿ ಆಯ್ಯರ್ ಗೆ ಜೊತೆಯಾದ ಜಡೇಜಾ ಲಂಕಾ ಬೌಲರ್ ಗಳ ಬೆವರಿಸಿದರು. 45 ರನ್ ಗಳಿಸಿ ಭಾರತದ ಗೆಲುವಿಗೆ ತಮ್ಮ ಕಾಣಿಕೆ ನೀಡಿದರು.