ಜ. 22 ರಂದು ಸರ್ಕಾರಿ ಕಚೇರಿಗೆ ಅರ್ಧ ದಿನ ರಜೆ: 2000 ರೂ. ನೋಟು ವಿನಿಮಯ ಇಲ್ಲ ಎಂದ RBI!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನವರಿ 22 ರಂದು ಸರ್ಕಾರಿ ಕಚೇರಿಗಳನ್ನು ಅರ್ಧ ದಿನ ಮುಚ್ಚುವ ಕಾರಣದಿಂದಾಗಿ 2000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು ಠೇವಣಿ ಮಾಡುವ ಸೌಲಭ್ಯ ಇರುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್(RBI) ತಿಳಿಸಿದೆ.

ಭಾರತ ಸರ್ಕಾರವು ಅರ್ಧ ದಿನ ರಜೆ ಘೋಷಿಸಿದ ಹಿನ್ನಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಯಾವುದೇ 19 ಕಚೇರಿಗಳಲ್ಲಿ ನೋಟು ವಿನಿಮಯ ಇರುವುದಿಲ್ಲ. ಈ ಸೌಲಭ್ಯವು ಮಂಗಳವಾರ, ಜನವರಿ 23, 2024 ರಂದು ಪುನರಾರಂಭವಾಗಲಿದೆ ಎಂದು ಆರ್.ಬಿ.ಐ. ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!