ಅರ್ಶದೀಪ್ ಸಿಂಗ್‌ಗೆ ಜಾಕ್‌ಪಾಟ್: ಮತ್ತೆ ಕೋಟಿ ಕೋಟಿ ಕೊಟ್ಟು ಖರೀದಿ ಮಾಡಿದ ಪಂಜಾಬ್​​

ಹೊಸದಿಗಂತ ಡಿಜಿಟಲ್ ಡೆಸ್ಕ್:

2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಮೆಗಾ ಹರಾಜಿನಲ್ಲಿ ಟೀಮ್​ ಇಂಡಿಯಾದ ಸ್ಟಾರ್​ ಬೌಲರ್​​ ಅರ್ಷದೀಪ್ ಸಿಂಗ್​​ ಪಂಜಾಬ್​​ ಕಿಂಗ್ಸ್​ ತಂಡದ ಪಾಲಾಗಿದ್ದಾರೆ. ಬರೋಬ್ಬರಿ 18 ಕೋಟಿ ನೀಡಿ ಅರ್ಷದೀಪ್ ಸಿಂಗ್ ಅವರನ್ನು ಖರೀದಿ ಮಾಡಲಾಗಿದೆ.

ಹರ್ಷದೀಪ್​ ಸಿಂಗ್​​​ ಬೇಸ್​ ಪ್ರೈಸ್​​ 2 ಕೋಟಿ. ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ಮೊದಲು ಅರ್ಷದೀಪ್ ಸಿಂಗ್​​ ಬಿಡ್​ ಮಾಡಿತು. ಇವರಿಗಾಗಿ ಗುಜರಾತ್​ ಟೈಟನ್ಸ್​, ಡೆಲ್ಲಿ ಕ್ಯಾಪಿಟಲ್ಸ್​, ಮುಂಬೈ ಇಂಡಿಯನ್ಸ್​​, ಆರ್​​ಸಿಬಿ, ರಾಜಸ್ಥಾನ್​ ರಾಯಲ್ಸ್​​ ಸೇರಿದಂತೆ ಪೈಪೋಟಿಗಿಳಿದವು. ಕೊನೆಗೂ ಅರ್ಷದೀಪ್ ಸಿಂಗ್​​ ಪಂಜಾಬ್ ಪಾಲಾದರು.

ಇತ್ತೀಚೆಗಷ್ಟೇ ಪಂಜಾಬ್​ ಕಿಂಗ್ಸ್​​ ತಂಡ ಅರ್ಷದೀಪ್ ಸಿಂಗ್ ಅವರನ್ನು ರಿಲೀಸ್​ ಮಾಡಿತ್ತು. ಇವರು ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಬರೋಬ್ಬರಿ 65 ಪಂದ್ಯ ಆಡಿದ್ದು, ಸುಮಾರು 76 ವಿಕೆಟ್​ ಪಡೆದಿದ್ದಾರೆ. ಇವರು ವಿಕೆಟ್​ ಟೇಕರ್​​ ಮತ್ತು ಡೆತ್​ ಬೌಲರ್​​. ಈಗ ಮತ್ತೆ ಆರ್​ಟಿಎಂ ಮೂಲಕ ಖರೀದಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!