ಜಡೇಜಾ ಏಕಾಂಗಿ ಹೋರಾಟಕ್ಕೆ ಸಿಗದ ಸಾಥ್: ಕೊನೆಗೂ ಲಾರ್ಡ್ಸ್‌ ಟೆಸ್ಟ್‌ನಲ್ಲಿ ಭಾರತಕ್ಕೆ ಸೋಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರವೀಂದ್ರ ಜಡೇಜಾ ಅವರ ಏಕಾಂಗಿ ಹೋರಾಟಕ್ಕೆ ಸರಿಯಾದ ಸಾಥ್ ಸಿಗದೇ ಭಾರತ ತಂಡ, ಮೂರನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ದ 22 ರನ್‌ಗಳಿಂದ ಸೋಲು ಒಪ್ಪಿಕೊಂಡಿತು . ಇಂಗ್ಲೆಂಡ್‌ ಲಾರ್ಡ್ಸ್‌ ಟೆಸ್ಟ್‌ ಗೆದ್ದು ಸರಣಿಯಲ್ಲಿ 2-1 ಮುನ್ನಡೆಯನ್ನು ಪಡೆದಿದೆ.

ಸೋಮವಾರ ಬೆಳಿಗ್ಗೆ 4 ವಿಕೆಟ್‌ ಕಳೆದುಕೊಂಡು 58 ರನ್‌ಗಳಿಂದ ಐದನೇ ದಿನವನ್ನು ಆರಂಭಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ರಿಷಭ್‌ ಪಂತ್‌ 12 ಎಸೆತಗಳಲ್ಲಿ 9 ರನ್‌ ಗಳಿಸಿ ಜೋಫ್ರಾ ಆರ್ಚರ್‌ ಅವರ ಮಾರಕ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. 33 ರನ್‌ಗಳಿಸಿ ಭಾರತಕ್ಕೆ ಭರವಸೆಯನ್ನು ಮೂಡಿಸಿದ್ದ ಕೆಎಲ್‌ ರಾಹುಲ್‌, ಬೆನ್‌ ಸ್ಟೋಕ್ಸ್‌ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ನಂತರ ಕ್ರೀಸ್‌ಗೆ ಬಂದ ವಾಷಿಂಗ್ಟನ್‌ ಸುಂದರ್‌, ಜೋಫ್ರಾ ಆರ್ಚರ್‌ ಎಸೆತದಲ್ಲಿ ಅವರಿಗೇ ಕ್ಯಾಚ್‌ ಕೊಟ್ಟರು. ಆ ಮೂಲಕ ಡಕ್‌ಔಟ್‌ ಆದರು. ಇದರೊಂದಿಗೆ ಭಾರತ 82 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಎಂಟನೇ ವಿಕೆಟ್‌ಗೆ ಜೊತೆಯಾಗಿದ್ದ ರವೀಂದ್ರ ಜಡೇಜಾ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ ಇಂಗ್ಲೆಂಡ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ್ದರು. ಈ ಜೋಡಿ 30 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡುವ ಮೂಲಕ ಭಾರತಕ್ಕೆ ಭರವಸೆಯನ್ನು ಮೂಡಿಸಿತ್ತು. ಈ ವೇಳೆ ನಿತೀಶ್‌ ರೆಡ್ಡಿ13 ರನ್‌ಗಳನ್ನು ಕಲೆ ಹಾಕಿ ವಿಕೆಟ್‌ ಒಪ್ಪಿಸಿದರು. ಈ ವೇಳೆ ಭಾರತ ತಂಡದ ಗೆಲುವಿನ ಹಾದಿ ಬಹುತೇಕ ಬಂದ್‌ ಆಯಿತು.

9ನೇ ವಿಕೆಟ್‌ಗೆ ಜೊತೆಯಾಟ ರವೀಂದ್ರ ಜಡೇಜಾ ಹಾಗೂ ಜಸ್‌ಪ್ರೀತ್‌ ಬುಮ್ರಾ ಆಂಗ್ಲರ ಮಾರಕ ದಾಳಿಯನ್ನು ಕೆಲಕಾಲ ಸಮರ್ಥವಾಗಿ ಎದುರಿಸಿದ್ದರು. ಬುಮ್ರಾ ಒಂದು ಕಡೆ ರಕ್ಷಣಾತ್ಮಕ ಆಟವನ್ನು ಆಡುತ್ತಿದ್ದರೆ, ಮತ್ತೊಂದು ತುದಿಯಲ್ಲಿ ಜಡೇಜಾ ಕೆಟ್ಟ ಎಸೆತಗಳಲ್ಲಿ ರನ್‌ ಗಳಿಸುತ್ತಿದ್ದರು. ಆದರೆ, ಜಸ್‌ಪ್ರೀತ್‌ ಬುಮ್ರಾ 54 ಎಸೆತಗಳಲ್ಲಿ 5 ರನ್‌ ಗಳಿಸಿ ಬೆನ್‌ ಸ್ಟೋಕ್ಸ್‌ಗೆ ವಿಕೆಟ್‌ ಒಪ್ಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!