ಜೂ.20ರಿಂದ ಜಗನ್ನಾಥ ರಥಯಾತ್ರೆ ಉತ್ಸವ: 25 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪುರಿ ಶ್ರೀ ಜಗನ್ನಾಥ ರಥಯಾತ್ರೆಯ ಉತ್ಸವ ಕಾರ್ಯಕ್ರಮ ಜೂ.20ರಂದು ಆರಂಭವಾಗಲಿದ್ದು, ಈ ಬಾರಿ ಸುಮಾರು 25 ಲಕ್ಷ ಭಕ್ತರು ಭೇಟಿ ನೀಡಬಹುದು ಎಂದು ದೇಗುಲದ ಆಡಳಿತ ಮಂಡಳಿ ನಿರೀಕ್ಷಿಸಿದೆ.

ಸುದ್ದಿಗಾರರ ಜೊತೆಗೆ ಮಾತನಾಡಿದ ದೇಗುಲದ ಆಡಳಿತ ಮಂಡಳಿಯ ಆಡಳಿತಾಧಿಕಾರಿ ರಂಜನ್‌ ಕುಮಾರ್ ದಾಸ್ , ರಥಯಾತ್ರೆ ಉತ್ಸವ ಕಾರ್ಯಕ್ರಮಗಳನ್ನು ಸುಗಮ ಮತ್ತು ಸುವ್ಯವಸ್ಥಿತವಾಗಿ ಆಯೋಜಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಜೂನ್ 20ರಂದು ಪುರಿಯಲ್ಲಿ ‘ಶ್ರೀ ಗುಂಡಿಚಾ ದಿನ’ ಕಾರ್ಯಕ್ರಮ ನಡೆಯಲಿದೆ. ಆ ದಿನ ಸುಮಾರು 10 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ. ಅಂದು ಭಕ್ತರು ಕೂಡಾ ರಥ ಎಳೆಯುವ ಕಾರ್ಯಕ್ಕೆ ಕೈಜೋಡಿಸುವರು ಎಂದರು.

ರಥಯಾತ್ರೆ ಉತ್ಸವ ಕಾರ್ಯಕ್ರಮದ ಭದ್ರತೆಗಾಗಿ ಆರ್‌ಎಎಫ್‌, ಒಡಿಆರ್‌ಎಎಫ್‌, ಎನ್‌ಡಿಆರ್‌ಎಫ್‌ ಸಿಬ್ಬಂದಿ ನೆರವು ಪಡೆಯಲಾಗುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!