ರಾಜ್ಯಸಭೆಯಲ್ಲಿ ಕನ್ನಡದ ಕಂಪು, ಕನ್ನಡಿಗರ ಪರ ಮಾತನಾಡಿದ ಜಗ್ಗೇಶ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಜನರು ವಿಶಾಲ ಹೃದಯದವರು ಎಲ್ಲವನ್ನೂ ಮುಕ್ತವಾಗಿ ಸ್ವೀಕರಿಸುತ್ತಾರೆ..

ರಾಜ್ಯಸಭೆಯಲ್ಲಿ ಜಗ್ಗೇಶ್ ಮಾತು ಆರಂಭಿಸಿದ್ದು ಹೀಗೆ..

ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಬ್ಯಾಂಕ್‌ಗಳು ಸೇರಿದಂತೆ ವಿವಿಧ ಸಂಸ್ಥೆಗಳ ಫ್ರಂಟ್ ಡೆಸ್ಕ್‌ನಲ್ಲಿ ಕನ್ನಡ ಮಾತನಾಡುವವರನ್ನು ನೇಮಿಸಿ ಎಂದು ಕೇಂದ್ರ ಸರ್ಕಾರಕ್ಕೆ ಜಗ್ಗೇಶ್ ಒತ್ತಾಯಿಸಿದ್ದಾರೆ.

ಪ್ರಧಾನಿ ಮೋದಿ ಯಾವಾಗಲೂ ಪ್ರಾದೇಶಿಕ ಭಾಷೆಗಳಿಗೆ ಪ್ರೋತ್ಸಾಹ ನೀಡುತ್ತಾರೆ. ಸ್ಥಳೀಯರಿಗೆ, ಕನ್ನಡ ಬಿಟ್ಟು ಬೇರೆ ಭಾಷೆ ಬರದೇ ಇದ್ದವರಿಗೆ ಬ್ಯಾಂಕ್‌ಗಳಲ್ಲಿ ವ್ಯವಹಾರ ಮಾಡುವುದು ಕಷ್ಟವಾಗುತ್ತಿದೆ. ಇದು ದೊಡ್ಡ ವಿಷಯ ಅಲ್ಲ, ಸಣ್ಣ ಸಮಸ್ಯೆ ಆದರೆ ಇದೇ ರಾಜ್ಯಗಳ ನಡುವೆ ವೈಮನಸ್ಸಿಗೂ ಕಾರಣವಾಗುತ್ತದೆ.

ಬೇರೆ ಬೇರೆ ಕಡೆಯಿಂದ ಸಿಬ್ಬಂದಿ ನಮ್ಮಲ್ಲಿ ಬರಲಿ, ತುಂಬು ಮನಸ್ಸಿನಿಂದ ಸ್ವಾಗತಿಸುತ್ತೇವೆ. ನಮ್ಮ ರಾಜ್ಯಕ್ಕೆ ಬಂದವರನ್ನು ನಮ್ಮ ಕುಟುಂಬದವರಂತೆ ನೋಡಿಕೊಳ್ಳುತ್ತೇವೆ. ನಮ್ಮ ಭಾಷೆಯನ್ನು ಅವರ ಮೇಲೆ ಹೇರೋದಿಲ್ಲ, ಅವರ ಭಾಷೆಯನ್ನೇ ನಾವು ಮಾತನಾಡಲು ಪ್ರಯತ್ನಿಸುತ್ತೇವೆ. ಅದಕ್ಕೆ ಅಲ್ವಾ ನಮ್ಮ ಬೆಂಗಳೂರಿನಲ್ಲಿ ಜನಕ್ಕೆ ಮೂರರಿಂದ ನಾಲ್ಕು ಭಾಷೆ ಪಕ್ಕಾ ಬರುತ್ತದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!