ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಕೊಟ್ಟಿಯೂರು ದೇವಸ್ಥಾನಕ್ಕೆ ನವರಸ ನಾಯಕ ಜಗ್ಗೇಶ್ ಅವರು ಭೇಟಿ ಕೊಟ್ಟಿದ್ದಾರೆ.
ವರ್ಷಕ್ಕೆ 30 ದಿನ ಮಾತ್ರ ತೆರೆದಿರುವ ಕೇರಳದ ಪುಣ್ಯಕ್ಷೇತ್ರಕ್ಕೆ ನಟ ಜಗ್ಗೇಶ್ ಭೇಟಿ ಕೊಟ್ಟು ವಿಶೇಷ ಪೂಜೆ ಪುನಸ್ಕಾರ ಮಾಡಿಸಿದ್ದಾರೆ. ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ಹೋಗಿರೋ ವಿಡಿಯೋವನ್ನು ನಟ ಜಗ್ಗೇಶ್ ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಶ್ರೀ ಕೊಟ್ಟಿಯೂರು ಶಿವನ ಆಲಯಕ್ಕೆ ಭೇಟಿ ನೀಡಿದ ಆಧ್ಯಾತ್ಮಿಕ ಕ್ಷಣ. ದಕ್ಷಬ್ರಹ್ಮನ ಶಿರಛೇದ ಮಾಡಿದ ಶಿವನ ಅಂಶ ವೀರಭದ್ರನ ಐತಿಹಾಸಿಕ ಕ್ಷೇತ್ರ ಎಂಬ ದೃಡನಂಬಿಕೆಯ. ವರ್ಷಕ್ಕೆ 28ದಿನಗಳು ಮಾತ್ರ ಪೂಜಾ ಕಾರ್ಯ ನಡೆಯುತ್ತದೆ ಈ ಕ್ಷೇತ್ರದಲ್ಲಿ. ಹಿಂದೆ ಕಾಡಿನ ಸುತ್ತಮುತ್ತ ವಾಸಮಾಡುತ್ತಿದ್ದ ಜನರ ಆರಾಧನ ಕ್ಷೇತ್ರವಾಗಿತ್ತು. ಇಂದು ಶಬರಿಮಲೆ ಅಯ್ಯಪ್ಪನ ಆಲಯದಂತೆ ಪ್ರಸಿದ್ಧಿ ಪಡೆದಿದೆ. ನನ್ನ ಆತ್ಮೀಯ ಮಿತ್ರ ಕೇರಳ ರಾಜ್ಯದ (DIG) ಪೋಲಿಸ್ ಆಧಿಕಾರಿ ಶ್ರೀ ಯತೀಶ್ ಚಂದ್ರರವರು ನನ್ನ ಬರಮಾಡಿಕೊಂಡು ದರುಶನಕ್ಕೆ ಸಹಕಾರಿಯಾದರು ಅಂತ ಬರೆದುಕೊಂಡಿದ್ದಾರೆ.
ಕೇರಳದ ಕೊಟ್ಟಿಯೂರು ಶಿವ ದೇವಾಲಯವು ಭಾರತದ ಅತ್ಯಂತ ಪುರಾತನ ಹಾಗೂ ಪವಿತ್ರ ಕ್ಷೇತ್ರಗಳ ಪೈಕಿ ಕೇರಳದ ಕೊಟ್ಟಿಯೂರು ಶಿವ ದೇವಸ್ಥಾನವೂ ಒಂದು. ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಈ ದೇವಸ್ಥಾನ ತೆರೆದಿರುವುದು ವರ್ಷಕ್ಕೆ 30 ದಿನಗಳು ಮಾತ್ರ. ಇದು ಶಿವ ತಪಸ್ಸು ಮಾಡಿದ ಪುಣ್ಯ ಸ್ಥಳ ಎಂಬ ನಂಬಿಕೆ ಇದೆ. ಈ ದೇವಾಲಯದ ದೊಡ್ಡ ವಿಶೇಷತೆಯೆಂದರೆ ಅದರ ವಾರ್ಷಿಕ ಉತ್ಸವ, ಇದನ್ನು ವೈಶಾಖಮೋತ್ಸವ ಎಂದು ಕರೆಯಲಾಗುತ್ತದೆ.