ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದಲ್ಲಿ ಹಿಂಸಾಚಾರ ಹೆಚ್ಚುತ್ತಿದ್ದು, ಹೊಸ ಹೊಸ ಕಾನೂನುಗಳನ್ನು ಜಾರಿಗೊಳಿಸುತ್ತಿದೆ.
ಇದೀಗ ರಂಜಾನ್ ಮಾಸದಲ್ಲಿ ಮಸೀದಿಗಳಿಗೆ ಸರಿಯಾಗಿ ಹೋಗದ, ಸರಿಯಾಗಿ ಹೇರ್‌ಕಟ್ ಮಾಡಿಸಿಕೊಳ್ಳದವರನ್ನು ತಾಲಿಬಾನ್ ನೈತಿಕ ವಿಭಾಗದ ಪೊಲೀಸರು ಅರೆಸ್ಟ್ ಮಾಡುತ್ತಿದ್ದಾರೆ.
ತಾಲಿಬಾನ್ ನಿಯಮಗಳ ಅನುಸಾರ ಹೇರ್‌ಕಟ್ ಮಾಡದ ಕ್ಷೌರಿಕರನ್ನು ಸಹ ಕಂಬಿ ಹಿಂದೆ ಕಳಿಸುತ್ತಿದ್ದಾರೆ.
ಇಂತಹ ಕ್ರಮಗಳಿಂದ ಸಣ್ಣ ವ್ಯಾಪಾರಿಗಳು, ಶಿಕ್ಷಣ ಸಂಸ್ಥೆಗಳು, ಸಲೂನ್‌ಗಳು, ಟೈಲರ್‌ಗಳು, ರೆಸ್ಟೋರೆಂಟ್, ಮದುವೆ ಬಾಣಸಿಗರಿಗೆ ಕೆಲಸ ಸಿಕ್ಕದಂತಾಗಿದೆ. ಆರ್ಥಿಕ ಸಮಸ್ಯೆಗಳು ಜನರನ್ನು ಹೈರಾಣು ಮಾಡುತ್ತಿವೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.
ಸಾರ್ವಜನಿಕ ನಡವಳಿಕೆಯನ್ನು ನಿಯಂತ್ರಿಸುವ ಕಾನೂನುಗಳು ಜಾರಿಗೆ ಬಂದ ಆರು ತಿಂಗಳ ನಂತರ ಈ ಘಟನೆಗಳು ಸಂಭವಿಸಿವೆ. ಕಳೆದ ಆಗಸ್ಟ್‌ನಲ್ಲಿ, ತಾಲಿಬಾನ್ ಜನರ ದೈನಂದಿನ ಜೀವನದ ಹಲವು ಅಂಶಗಳನ್ನು ನಿಯಂತ್ರಿಸುವ ಹೊಸ ಕಾನೂನುಗಳನ್ನು ಜಾರಿಗೆ ತಂದಿತು. ಇವುಗಳಲ್ಲಿ ಸಾರ್ವಜನಿಕ ಸಾರಿಗೆ, ಸಂಗೀತ, ಕ್ಷೌರ ಮತ್ತು ಆಚರಣೆಗಳ ಮೇಲಿನ ನಿಷೇಧಗಳು ಸೇರಿವೆ.