ಜೈಲು ಸೇರಿದ್ದ ಸಿಧು ಸಖತ್ ಬ್ಯುಸಿ: ಅಲ್ಲಿ ಮಾಜಿ ಕ್ರಿಕೆಟಿಗನ ಕೆಲಸವೇನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು ಜೈಲು ವಾಸ ಅನುಭವಿಸುತ್ತಿದ್ದು, ಅಲ್ಲಿ ಅವರಿಗೆ ಹೊಸ ಹುದ್ದೆಯ ಹೊಣೆ ನೀಡಿದ್ದಾರೆ.
ಪಂಜಾಬ್ ಪ್ರದೇಶ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರೂ ಆಗಿದ್ದ ನವಜೋತ್ ಸಿಂಗ್ ಸಿಧು ಜೈಲಿನ ಕಡತಗಳ ಖಾತೆಯನ್ನು ನೋಡಿಕೊಳ್ಳುವ ಗುಮಾಸ್ತನ ಕಾರ್ಯ ನಿರ್ವಹಿಸುತ್ತಿದ್ದಾರೆ.
34 ವರ್ಷದ ಹಿಂದಿನ ರಸ್ತೆ ಅಪಘಾತ ಪ್ರಕರಣದಲ್ಲಿ ಸಿಧುಗೆ ಸುಪ್ರೀಂಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೈಲಿನಲ್ಲಿ ಸಿಧು ಅರ್ಹತೆ ಮತ್ತು ಶಿಕ್ಷಣಕ್ಕೆ ಅನುಗುಣವಾಗಿ ಕೆಲಸವನ್ನು ನೀಡಲಾಗಿದೆ. ಇದಕ್ಕಾಗಿ ಅವರು ತಮ್ಮ ಬ್ಯಾರಕ್‌ನಿಂದ ಹೊರಬರಬೇಕಾಗಿಲ್ಲ. ಆದರೆ, ಅವರ ಕೆಲಸಕ್ಕೆ ಸಂಬಂಧಿಸಿದ ಎಲ್ಲ ಫೈಲ್‌ಗಳನ್ನು ಅವರ ಬ್ಯಾರಕ್‌ಗೆ ಕಳುಹಿಸಲಾಗುತ್ತದೆ. ಒಂದು ದಿನದಲ್ಲಿ ಎಷ್ಟು ಕೆಲಸ ಮಾಡಲಬಲ್ಲರು ಎಂಬುದರ ಮೇಲೆ ಕಡತಗಳ ರವಾನೆ ಅವಲಂಬಿತವಾಗಿರುತ್ತದೆ ಎಂದು ಪಟಿಯಾಲ ಜೈಲಿನ ಅಧಿಕಾರಿ ಮನ್​ಜೀತ್ ಸಿಂಗ್ ತಿವಾನಾ ಮಾಹಿತಿ ನೀಡಿದ್ದಾರೆ.
ಮೂರು ತಿಂಗಳ ತರಬೇತಿ:
ಜೈಲು ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಸಿಧು ಕ್ಲರ್ಕ್ ಕೆಲಸದಲ್ಲಿ ಇನ್ನೂ ಪರಿಣಿತರಲ್ಲ. ಹೀಗಾಗಿ ಮೊದಲ ಮೂರು ತಿಂಗಳವರೆಗೆ ಅವರನ್ನು ಟ್ರೈನಿಯಾಗಿ ಉಳಿಸಿಕೊಳ್ಳಲಾಗುತ್ತದೆ. ಅದರಲ್ಲಿ ಅವರಿಗೆ ವೇತನ ಸಿಗುವುದಿಲ್ಲ. ಈ ಮೊದಲು ಅವರಿಗೆ ಜೈಲಿನೊಳಗೆ ಕಾರ್ಖಾನೆ ಅಥವಾ ಪೀಠೋಪಕರಣಗಳ ಕೆಲಸವನ್ನು ನೀಡುವ ನಿರೀಕ್ಷೆ ಇದೆ. ಆದರೆ, ಅರ್ಹತೆ ಮತ್ತು ಶಿಕ್ಷಣದ ಜೊತೆಗೆ ಅವರ ಸುರಕ್ಷತೆಯ ಕಾರಣ ಈ ಕೆಲಸದಿಂದ ದೂರ ಇಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!