ಮೋದಿ ಕ್ರೀಡಾಂಗಣದಲ್ಲಿ ಮೊಳಗಿತು ಜೈಶ್ರೀರಾಂ ಘೋಷಣೆ: ಇದು ತಪ್ಪೆಂದ ಉದನಿಧಿ ಸ್ಟಾಲಿನ್ ಗೆ ಅಣ್ಣಾಮಲೈ ಕ್ಲಾಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಗೆಲುವು ದಾಖಲಿಸಿದ್ದು, ಇದರ ಜೊತೆಗೆ ಕ್ರೀಡಾಂಗಣದ ಕೆಲ ವೈರಲ್ ವಿಡಿಯೋಗಳು ಕುರಿತು ಭಾರಿ ಚರ್ಚೆಯಾಗುತ್ತಿದೆ.

ಈ ಪೈಕಿ ಪಾಕಿಸ್ತಾನ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಔಟಾಗಿ ಪೆವಿಲಿಯನ್‌ಗೆ ಮರಳುತ್ತಿದ್ದಂತೆ ಅಭಿಮಾನಿಗಳು ಜೈಶ್ರೀರಾಂ ಘೋಷಣೆ ಕೂಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ

ಈ ಕುರಿತು ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಸಚಿವ, ಸಿಎಂ ಪುತ್ರ ಉದನಿಧಿ ಸ್ಟಾಲಿನ್ ಭಾರತೀಯ ಕ್ರಿಕೆಟ್ ಅಭಿಮಾನಿಗಳ ನಡೆಯನ್ನು ಖಂಡಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟಿಗನ ಮುಂದೆ ಜೈ ಶ್ರೀರಾಂ ಘೋಷಣೆ ಕ್ರೀಡಾ ಮನೋಭಾವವಲ್ಲ ಎಂದು ಹೇಳಿದ್ದಾರೆ.

ಇದೀಗ ಸ್ಟಾಲಿನ್‌ಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಖಡಕ್ ತಿರುಗೇಟು ನೀಡಿದ್ದಾರೆ.

ಮೊಹಮ್ಮದ್ ರಿಜ್ವಾನ್ ಭಾರತ ವಿರುದ್ದ 69 ಎಸೆತದಲ್ಲಿ 49 ರನ್ ಸಿಡಿಸಿ ಔಟಾಗಿದ್ದರು. ಪೆವಿಲಿಯನ್‌ಗೆ ಮರಳುತ್ತಿದ್ದ ರಿಜ್ವಾನ್‌ಗೆ ಅಭಿಮಾನಿಗಳು ಜೈಶ್ರೀರಾಂ ಘೋಷಣೆ ಕೂಗಿದ್ದಾರೆ. ಈ ವಿಡಿಯೋವನ್ನು ಎಕ್ಸ್ ಖಾತೆ ಮೂಲಕ ಹಂಚಿಕೊಂಡಿರುವ ಉದನಿಧಿ ಸ್ಟಾಲಿನ್, ಭಾರತದ ಕ್ರೀಡಾಮನೋಭಾವವಲ್ಲ. ಇದು ದ್ವೇಷ ಹರಡು ಸಂಸ್ಕೃತಿಯಾಗಿದೆ ಎಂದಿದ್ದಾರೆ. ‘ಭಾರತ ತನ್ನ ಕ್ರೀಡಾ ಮನೋಭಾವ ಹಾಗೂ ಅತ್ಯುತ್ತಮ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಆದರೆ ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಆಟಗಾರರ ಮುಂದೆ ಅಭಿಮಾನಿಗಳು ತೋರಿದ ವರ್ತನೆ ಸರಿಯಲ್ಲ. ಕ್ರೀಡೆಗಳು ದೇಶಳನ್ನು ಒಗ್ಗೂಡಿಸುವ, ಸೌಹಾರ್ಧತೆ, ನಿಜವಾದ ಸಹೋದರತ್ವವನ್ನು ಬೆಳೆಸಬೇಕು. ಆದರೆ ದ್ವೇಷ ಹರಡವು ಸಾಧನವಾಗಿ ಬಳಕೆ ಮಾಡಲಾಗುತ್ತಿದೆ’ ಎಂದು ಉದನಿಧಿ ಸ್ಟಾಲಿನ್ ಹೇಳಿದ್ದಾರೆ.

ಅಣ್ಣಾಮಲೈ ತಿರುಗೇಟು
ಭಾರತ ದೇಶ ಪಾಕಿಸ್ತಾನ ತಂಡಕ್ಕೆ ಪ್ರತಿ ಭಾರಿ ಗೌರವ ನೀಡಿದೆ. ಇದರಲ್ಲಿ ಕಿಂಚಿತ್ತು ಕಡಿಮೆಯಾಗಿಲ್ಲ. ಕ್ರೀಡೆಯನ್ನು ಕ್ರೀಡೆಯಾಗಿ ನೋಡಿ ಎಂದು ನೀವು ಹೇಳಿದ್ದೀರಿ. ಹಾಗಯೇ ಧರ್ಮವನ್ನು ಧರ್ಮವಾಗಿ ನೋಡಿ. ಮತ್ಯಾಕೆ ಸನಾತನ ಧರ್ಮವನ್ನು ನಾಶ ಮಾಡಲು ಹೊರಟಿದ್ದೀರಿ. ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ 13 ರನ್‌ಗಳಿಂದ ಗೆದ್ದಾಗ ಭಾರತೀಯ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿದ್ದರು. ಹೈದರಾಬಾದ್, ಅಹಮ್ಮದಾಬಾದ್‌ನಲ್ಲೂ ಪಾಕಿಸ್ತಾನ ತಂಡಕ್ಕೆ ಅದ್ಧೂರಿ ಸ್ವಾಗತ ಕೋರಲಾಗಿದೆ.ಎಲ್ಲಾ ರೀತಿಯ ಗೌರವ ನೀಡಲಾಗಿದೆ. ಇನ್ನು ಪಾಕಿಸ್ತಾನ ಆಟಗಾರರ ಪಾಸ್ ಆಗುವ ವೇಳೆ ಜೈಶ್ರೀರಾಂ ಘೋಷಣೆ ಕೂಗಿದ್ದಾರೆ. ಇದರಲ್ಲಿ ಅಗೌರವ ತೋರಿದ ಮಾತೆಲ್ಲಿ. ಅಭಿಮಾನಿಗಳು ಅವರ ಭಾವನೆ ವ್ಯಕ್ತಪಡಿಸಿದ್ದಾರೆ. ಒತ್ತಾಯ ಹೇರಿಲ್ಲ. ಇದರಲ್ಲಿ ರಾಜಕೀಯ ಹುಡುಕು ಸಣ್ಣಮಟ್ಟಕ್ಕೆ ಇಳಿಯದೇ ಇರುವುದು ಒಳಿತು ಎಂದು ಅಣ್ಣಾಮಲೈ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!