ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಲ್ ಜೀವನ್ ಮಿಷನ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ತಂಡ ಶುಕ್ರವಾರ ಬೆಳಗ್ಗೆ ರಾಜಸ್ಥಾನದ 25 ಸ್ಥಳಗಳಲ್ಲಿ ದಾಳಿ ನಡೆಸಿದೆ. ರಾಜಸ್ಥಾನದ ಜಲ ಜೀವನ್ ಮಿಷನ್ ಯೋಜನೆಯಲ್ಲಿನ ಅಕ್ರಮ ಹಣವರ್ಗಾವಣೆ ಬಗ್ಗೆ ಇಡಿ ತನಿಖೆ ನಡೆಸುತ್ತಿದ್ದು, ಜೈಪುರದ ಐಎಎಸ್ ಅಧಿಕಾರಿ ಸುಬೋಧ್ ಅಗರ್ವಾಲ್ ಅವರ ನಿವಾಸ ಸೇರಿದಂತೆ 25 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ.
ಈ ದಾಳಿಯ ಬಗ್ಗೆ ಸಿಎಂ ಗೆಹ್ಲೋಟ್ ಪ್ರತಿಕ್ರಿಯಿಸಿದ್ದು, ‘ಇಷ್ಟು ದೊಡ್ಡ ದೇಶದಲ್ಲಿ ಆರ್ಥಿಕ ಅಪರಾಧ ನಡೆಯುವುದಿಲ್ಲವೇ? ಏಜೆನ್ಸಿಗಳು ಈ ಬಗ್ಗೆ ಗಮನಹರಿಸಬೇಕು. ಇಡಿ ಫೋಕಸ್ ರಾಜಕಾರಣಿಗಳ ಮೇಲೆ ಮಾತ್ರ..ಸರ್ಕಾರ ಉರುಳಿಸಲು ಇಡಿ ಬಳಸುವುದು ತಪ್ಪು. ಚುನಾವಣೆ ಗೆಲ್ಲಲು ಸಿಬಿಐ, ಇಡಿ ಮೂಲಕ ಕೊಳಕು ರಾಜಕಾರಣ ಮಾಡುಲಾಗುತ್ತಿದೆ ಎಂದು ಕೇಂದ್ರದ ವಿರುದ್ಧ ಆರೋಪಗಳ ಸುರಿಮಳೆ ಹರಿಸಿದರು.
ತಮಿಳುನಾಡಿನಲ್ಲೂ ಐಟಿ ದಾಳಿ
ಇತ್ತ ತಮಿಳುನಾಡು ಸಚಿವ ಇವಿ ವೇಲು ಮನೆಯಲ್ಲಿ ಐಟಿ ಶೋಧ ನಡೆಯುತ್ತಿದೆ. ಚೆನ್ನೈ, ತಿರುವಳ್ಳೂರು, ತಿರುವಣ್ಣಲೈ ಮತ್ತು ಕೊಯಮತ್ತೂರಿನಲ್ಲಿ ಅಧಿಕಾರಿಗಳು ಏಕಕಾಲದಲ್ಲಿ 40 ಕ್ಕೂ ಹೆಚ್ಚು ಐಟಿ ತಂಡ ಶೋಧ ನಡೆಸುತ್ತಿದ್ದಾರೆ. ಸಚಿವರ ಮನೆ ಹಾಗೂ ಅವರಿಗೆ ಸಂಬಂಧಿಸಿದ ಖಾಸಗಿ ಕಾಲೇಜುಗಳಲ್ಲಿ ಶೋಧ ನಡೆಸಲಾಗುತ್ತಿದೆ.