January21, 2026
Wednesday, January 21, 2026
spot_img

ನಿಮ್ಮ ಸಹಾಯವನ್ನು ಎಂದಿಗೂ ಮರೆಯೋದಿಲ್ಲ: ಭಾರತಕ್ಕೆ ಬಿಗ್‌ ಥ್ಯಾಂಕ್ಸ್‌ ಎಂದ ಜಮೈಕಾ-ಕ್ಯೂಬಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೆಲಿಸ್ಸಾ ಚಂಡಮಾರುತವು ಕೆರಿಬಿಯನ್​ನಲ್ಲಿ ಭಾರಿ ವಿನಾಶವನ್ನುಂಟುಮಾಡಿತ್ತು. ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಈ ಕಷ್ಟದ ಸಮಯದಲ್ಲಿ ಭಾರತ ಸ್ನೇಹದ ಹಸ್ತವನ್ನು ಚಾಚಿದೆ, ಕ್ಯೂಬಾ ಮತ್ತು ಜಮೈಕಾ ಭಾರತಕ್ಕೆ ಧನ್ಯವಾದ ತಿಳಿಸಿವೆ.

ಎರಡೂ ದೇಶಗಳು ಈ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿವೆ. ಭಾರತವು ಅಗತ್ಯ ಔಷಧಿಗಳು, ಜನರೇಟರ್‌ಗಳು, ಟೆಂಟ್‌ಗಳು, ಹಾಸಿಗೆ ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ಒದಗಿಸಿದೆ.

ಕಳೆದ 150 ವರ್ಷಗಳಲ್ಲಿ ಕೆರಿಬಿಯನ್ ಪ್ರದೇಶದಲ್ಲಿ ಅಪ್ಪಳಿಸಿದ ಅತ್ಯಂತ ಅಪಾಯಕಾರಿ ಚಂಡಮಾರುತ ಮೆಲಿಸ್ಸಾ . ಜಮೈಕಾ, ಕ್ಯೂಬಾ ಮತ್ತು ಹೈಟಿಯಲ್ಲಿ ತೀವ್ರ ಪ್ರವಾಹ ಮತ್ತು ಭೂಕುಸಿತಗಳು ಹಲವಾರು ಕಟ್ಟಡಗಳು ಕುಸಿದಿವೆ. ಪಶ್ಚಿಮ ಜಮೈಕಾದಲ್ಲಿ ಐದು ಮಿಲಿಯನ್ ಮೆಟ್ರಿಕ್ ಟನ್ ಅವಶೇಷಗಳು ಸಂಗ್ರಹವಾಗಿದ್ದು, ಇದು ಅರ್ಧ ಮಿಲಿಯನ್ ದೊಡ್ಡ ಟ್ರಕ್‌ಗಳ ತೂಕಕ್ಕೆ ಸಮನಾಗಿದೆ. ಜಮೈಕಾದ GDP ಯ ಸುಮಾರು 30 ಪ್ರತಿಶತ ನಾಶವಾಗಿದೆ.

ಇದಲ್ಲದೆ, ಹೈಟಿ ಮತ್ತು ಜಮೈಕಾದಲ್ಲಿ ಇದುವರೆಗೆ 75 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಲಕ್ಷಾಂತರ ಜನರು ಇನ್ನೂ ಸಹಾಯಕ್ಕಾಗಿ ಕಾಯುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಭಾರತದ ತ್ವರಿತ ನೆರವು ಎರಡೂ ದೇಶಗಳ ಜನರ ಹೃದಯಗಳನ್ನು ಗೆದ್ದಿದೆ.

Must Read