ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದುಗಳ ಮಾರಣಹೋಮ ಆಗಿದ್ದು, ಸದ್ಯ ಇಡೀ ಕಾಶ್ಮೀರ ಸ್ತಬ್ಧವಾಗಿದೆ. ಪಹಲ್ಗಾಮ್‌ನಲ್ಲಿ ಇರುವ 12 ಅತಿಥಿ ಗೃಹಗಳ ಎಲ್ಲ ಕೊಠಡಿಗಳು ಖಾಲಿಯಾಗಿದ್ದು, ಮುಂಗಡ ಬುಕ್ಕಿಂಗ್‌ಗಳು ಕೂಡ ಕ್ಯಾನ್ಸಲ್ ಆಗಿವೆ.
ನಮ್ಮ ಎಲ್ಲಾ ಮುಂಗಡ ಬುಕಿಂಗ್‌ಗಳು ಈಗ ರದ್ದಾಗಿವೆ. ನಾವು ಈ ವರ್ಷ ಈ ಹೋಟೆಲ್ ಅನ್ನು ಗುತ್ತಿಗೆಗೆ ತೆಗೆದುಕೊಂಡಿದ್ದೇವೆ. ಕಳೆದ ತಿಂಗಳಿನಿಂದ ಹೋಟೆಲ್ ಪ್ರವಾಸಿಗರಿಂದ ಭರ್ತಿಯಾಗುತ್ತಿತ್ತು. ಭಾರೀ ಪ್ರವಾಸಿಗರ ದಟ್ಟಣೆಯನ್ನು ನಿರೀಕ್ಷಿಸಿದ್ದೆವು. ಆದರೆ, ದಾಳಿಯಿಂದ ಉಂಟಾದ ಭೀತಿಯ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಬಂದ ಭಾಗಶಃ ಜನ ಇಂದು ಬೆಳಿಗ್ಗೆಯೇ ಕಾಶ್ಮೀರ ತೊರೆದಿದ್ದಾರೆ. ಹಾಗಾಗಿ ಹೋಟೆಲ್ ಖಾಲಿಯಾಗಿದೆ.ಇನ್ನು ಕೆಲವು ಕಾಲ ಜನ ಬರೋದಿಲ್ಲ ಎಂದು ಅತಿಥಿ ಗೃಹದ ಮಾಲೀಕರು ಹೇಳಿದ್ದಾರೆ.
ರಾಜಧಾನಿ ಶ್ರೀನಗರದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಪಹಲ್ಗಾಮ್‌ನ ದಟ್ಟವಾದ ಅರಣ್ಯ ಪ್ರದೇಶದ ಆರು ಕಿಲೋಮೀಟರ್ ದೂರದಲ್ಲಿರುವ ಬಸಿರಾನ್‌ನಲ್ಲಿ ಈ ದಾಳಿ ಸಂಭವಿಸಿದೆ. ಕುದುರೆ ಮೂಲಕ ಮಾತ್ರ ಪ್ರಯಾಣಿಸಬಹುದಾದ ಸ್ಥಳ ಇದಾಗಿದೆ.