ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗಿನ ಹಿಟ್ ಸಿನಿಮಾ ‘ಭಗವಂತ ಕೇಸರಿ’ಯ ರೀಮೇಕ್ ಆಗಿರುವ ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸಿದೆ. ಈ ಕುರಿತು ಚಿತ್ರತಂಡ ನ್ಯಾಯಾಲಯದ ಮೆಟ್ಟಿಲೇರಿದರೂ, ಅಲ್ಲಿನ ವಿಚಾರಣೆ ವಿಳಂಬವಾಗುತ್ತಿದೆ. ತಮಿಳುನಾಡು ವಿಧಾನಸಭೆ ಚುನಾವಣೆ ಘೋಷಣೆಯಾದರೆ ಸಿನಿಮಾ ಬಿಡುಗಡೆ ಎರಡು ತಿಂಗಳು ಮುಂದಕ್ಕೆ ಹೋಗುವ ಭೀತಿ ಚಿತ್ರತಂಡಕ್ಕಿದೆ.
ಕೇವಲ ರೀಮೇಕ್ ಸಿನಿಮಾವಾಗಿದ್ದರೂ, ವಿಜಯ್ ಅವರ ರಾಜಕೀಯ ಪ್ರವೇಶಕ್ಕೆ ಪೂರಕವಾಗುವಂತೆ ಸಿನಿಮಾದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿತ್ತು.
ಟಿವಿಕೆ ಪಕ್ಷದ ಸಿದ್ಧಾಂತಗಳ ಪ್ರಚಾರ.
ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಬರೆದ ಖಾರವಾದ ಸಂಭಾಷಣೆಗಳು.
ರಾಜಕೀಯ ಪ್ರೇರಿತ ಆಕ್ಷನ್ ದೃಶ್ಯಗಳು.
ಇದನ್ನೂ ಓದಿ:
ಕಾನೂನು ಹೋರಾಟ ನಡೆಸುತ್ತಾ ಕುಳಿತರೆ ಸಿನಿಮಾ ಬಿಡುಗಡೆ ತಡವಾಗಬಹುದು ಎಂಬ ಕಾರಣಕ್ಕೆ, ಚಿತ್ರದ ನಿರ್ಮಾಪಕರು ರಾಜಿ ಹಾದಿ ತುಳಿದಿದ್ದಾರೆ. ವಿವಾದಕ್ಕೆ ಕಾರಣವಾಗಿರುವ ಸುಮಾರು 20 ನಿಮಿಷಗಳ ರಾಜಕೀಯ ದೃಶ್ಯ ಹಾಗೂ ಸಂಭಾಷಣೆಗಳನ್ನು ಕತ್ತರಿಸಿ ಹಾಕಲು ತಂಡ ನಿರ್ಧರಿಸಿದೆ. ಈ ಮೂಲಕ ವಿವಾದಿತ ಅಂಶಗಳನ್ನು ತೆಗೆದು ಹಾಕಿ, ಸುಲಭವಾಗಿ ಸೆನ್ಸಾರ್ ಪ್ರಮಾಣಪತ್ರ ಪಡೆದು ಸಿನಿಮಾವನ್ನು ಶೀಘ್ರವಾಗಿ ತೆರೆಗೆ ತರಲು ಸಿದ್ಧತೆ ನಡೆಸಲಾಗಿದೆ.
ತಮ್ಮ ಪಕ್ಷ ‘ತಮಿಳಗ ವೆಟ್ರಿ ಕಳಗಮ್’ ಮೂಲಕ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿಯುತ್ತಿರುವ ವಿಜಯ್‌ಗೆ, ಈ ಸಿನಿಮಾ ಒಂದು ಪ್ರಬಲ ಪ್ರಚಾರದ ಅಸ್ತ್ರವಾಗಿತ್ತು. ಆದರೆ ಸೆನ್ಸಾರ್ ಭೀತಿಯಿಂದ ರಾಜಕೀಯ ದೃಶ್ಯಗಳೇ ಮಾಯವಾಗುತ್ತಿರುವುದು ಅವರ ಅಭಿಮಾನಿಗಳಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಕೊಂಚ ನಿರಾಸೆ ಮೂಡಿಸಿದೆ.



