ಅಮೆರಿಕದ ಬೆಲೆ ನಿಗದಿ ಸೂತ್ರ ಉಲ್ಲಂಘಿಸಿ ರಷ್ಯದಿಂದ ತೈಲ ಖರೀದಿಸಿದ ಜಪಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ಸಂಘರ್ಷದ ಪರಿಣಾಮ ಅಮೆರಿಕ ಹಾಗು ಯುರೋಪಿಯನ್‌ ರಾಷ್ಟ್ರಗಳು ರಷ್ಯಾ ತೈಲ ಖರೀದಿಯ ಮೇಲೆ ಬೆಲೆ ನಿರ್ಭಂಧವನ್ನು ವಿಧಿಸಿದೆ. ಇದರ ಅನ್ವಯ ರಷ್ಯಾ ತೈಲವನ್ನು ಪ್ರತಿ ಬ್ಯಾರೆಲ್‌ಗೆ 60ಡಾಲರ್‌ ಗಿಂತ ಹೆಚ್ಚಿನ ಬೆಲೆಯಲ್ಲಿ ಖರೀದಿಸುವಂತಿಲ್ಲ. ಆದರೆ ಜಪಾನ್‌ ಈ ನಿಯಮವನ್ನು ಮೀರಿ ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸಿದೆ. ಉಕ್ರೇನ್ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಅನೇಕ ಯುರೋಪಿಯನ್ ರಾಷ್ಟ್ರಗಳು ರಷ್ಯಾದ ತೈಲವನ್ನು ನಿರ್ಬಂಧಿಸಿವೆ ಆದರೆ ಜಪಾನ್‌ ರಷ್ಯಾದಿಂದ ನೈಸರ್ಗಿಕ ಅನಿಲ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸಿದೆ.

ರಷ್ಯಾವು ಉಕ್ರೇನಿನ ಮೇಲೆ ಆಕ್ರಮಣ ಮಾಡಿದ್ದನ್ನು ವಿರೋಧಿಸಿ ಅಮರಿಕವು ರಷ್ಯಾದ ಕಚ್ಚಾತೈಲ ಮಾರಾಟವನ್ನು ಕುಂಠಿತಗೊಳಿಸಿ ಅದರಿಂದ ರಷ್ಯಾದ ಆದಾಯವನ್ನು ಕಡಿಮೆ ಮಾಡಲು ರಷ್ಯಾ ತೈಲದ ಮೇಲೆ ಬೆಲೆ ನಿರ್ಭಂಧವನ್ನು ವಿಧಿಸಿತ್ತು. ಆದರೆ ಇದೀಗ ಕ್ವಾಡ್‌, ಜಿ7, ಹೀಗೆ ಅನೇಕ ಗುಂಪುಗಳಲ್ಲಿ ಅಮೆರಿಕದೊಂದಿಗೆ ಹೆಚ್ಚಿನ ಮಿತೃತ್ವ ಹೊಂದಿರುವ ಜಪಾನ್‌ ರಷ್ಯಾ ತೈಲವನ್ನು ಹೆಚ್ಚಿನ ಬೆಲೆಗೆ ಖರೀದಿಸಲು ಮುಂದಾಗಿದ್ದು ಈ ಕುರಿತು ಅಮೆರಿಕವೇ ಅಧಿಕೃತವಾಗಿ ವಿನಾಯಿತಿ ಘೋಷಿಸಿದೆ ಎಂದು ಮೂಲಗಳು ವರದಿ ಮಾಡಿವೆ.

ಜಪಾನಿನ ಬಳಿ ಅದರದೇ ಆದ ಯಾವುದೇ ಇಂಧನ ಮೂಲಗಳಿಲ್ಲ. ತನ್ನ ಇಂಧನ ಅಗತ್ಯತೆಗಳಿಗೆ ಜಪಾನ್‌ ಸಂಪೂರ್ಣವಾಗಿ ಇತರ ದೇಶಗಳಮೇಲೆ ಅವಲಂಬಿತವಾಗಿದೆ. ಈ ಕಾರಣದಿಂದಾಗಿಯೇ ಜಪಾನ್‌ ಉಕ್ರೇನ್‌ ಅನ್ನು ಬೆಂಬಲಿಸಲಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!