ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಮೌಳಿ ನಿರ್ದೇಶನದ, ರಾಮ್ ಚರಣ್ ಮತ್ತು ಎನ್ಟಿಆರ್ ಅಭಿನಯದ RRR ಚಿತ್ರ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಕಂಡಿತು. 1100 ಕೋಟಿಗೂ ಹೆಚ್ಚು ಗಳಿಸಿ ತನ್ನ ಖಜಾನೆಗೆ ಸೇರಿಸಿಕೊಂಡಿದ್ದಲ್ಲದೆ ಇದೀಗ ಈ ಸಿನಿಮಾ ಜಪಾನ್ ಬಾಕ್ಸ್ ಆಫೀಸ್ ನಲ್ಲೂ ಕಲೆಕ್ಷನ್ ಕಿಂಗ್ ಆಗಲು ಸಜ್ಜಾಗಿದೆ.
ಡ್ರ್ಯಾಗನ್ ದೇಶದಲ್ಲಿ ತೆಲುಗು ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಈಗಾಗಲೇ ‘ಆರ್‌ಆರ್‌ಆರ್’ ತೆಲುಗು ಆವೃತ್ತಿಯನ್ನು ಸಬ್‌ಟೈಟಲ್‌ಗಳೊಂದಿಗೆ ವೀಕ್ಷಿಸಿರುವ ಅವರು, ಜಪಾನೀಸ್ ಡಬ್ಬಿಂಗ್ ಆವೃತ್ತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಇದೇ ಶುಕ್ರವಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದು, ಪ್ರಚಾರಕ್ಕಾಗಿ ಚಿತ್ರತಂಡ ಜಪಾನ್ ತಲುಪಿದೆ.
ಡ್ರಾಗನ್ ಕಂಟ್ರಿಯಲ್ಲಿ ಚಿತ್ರತಂಡದ ಜೊತೆಗೆ ಚರಣ್ ಹಾಗೂ ಎನ್ ಟಿಆರ್ ಕುಟುಂಬಸ್ಥರು ಕೂಡ ಭಾಗಿಯಾಗಿದ್ದಾರೆ. ನಿರ್ದೇಶಕ ರಾಜಮೌಳಿ, ಎನ್‌ಟಿಆರ್ ಮತ್ತು ರಾಮಚರಣ್ ಇಂದು ಜಪಾನ್ ಮಾಧ್ಯಮದವರೊಂದಿಗೆ ಸಂವಾದ ನಡೆಸಿದರು. ತಾರಕ್ ಮತ್ತು ಚರಣ್ ಜಪಾನ್‌ನಲ್ಲೂ ಅಭಿಮಾನಿಗಳನ್ನು ಹೊಂದಿರುವುದರಿಂದ, ಈ ಚಿತ್ರಕ್ಕೆ ಮತ್ತಷ್ಟು ಯಶಸ್ಸು ಸಿಗುವುದು ಖಚಿತ ಅಂತಿದಾರೆ ವೀಕ್ಷಕರು.