ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದೇಶಿ ಅತಿಥಿಗಳು ಭಾರತಕ್ಕೆ ಬಂದಾಗಲೆಲ್ಲ ಇಲ್ಲಿನ ಆಹಾರ ಸವಿಯುವ ಮೂಲಕ ಸಂತಸ ವ್ಯಕ್ತಪಡಿಸುತ್ತಾರೆ. ಇಂತಹ ವಿಡಿಯೋಗಳು ನೆಟ್ ನಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಇತ್ತೀಚೆಗೆ ಜಪಾನ್ ರಾಯಭಾರಿ ಹಿರೋಷಿ ಸುಜುಕಿ ತನ್ನ ಪತ್ನಿಯೊಂದಿಗೆ ಪುಣೆ ಮತ್ತು ಕೊಲ್ಲಾಪುರದ ಬೀದಿಗಳಲ್ಲಿ ಭಾರತೀಯ ಆಹಾರವನ್ನು ತಿನ್ನುತ್ತಿರುವ ವೀಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತನ್ನ ಪತ್ನಿ ತನಗೆ ತಿನ್ನಿಸಿ ತಿನ್ನಿಸಿ ಸಾಯಿಸುತ್ತಿದ್ದಾಳೆ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ನಾನ್ ಸ್ಪೈಸಿ ಫುಡ್ ಆರ್ಡರ್ ಮಾಡಿದ್ರೆ ಪತ್ನಿ ಮಸಾಲೆ ಫುಡ್ ಆರ್ಡರ್ ಮಾಡಿ ತಿನ್ನಿಸ್ತಾರೆ ಎಂದು ನೆಟಿಜನ್ ಗಳ ಜೊತೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸುಜುಕಿ ಶೇರ್ ಮಾಡಿರುವ ಈ ವಿಡಿಯೋಗಳಿಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಭಾರತೀಯ ಪಾಕಪದ್ಧತಿಯ ವೈವಿಧ್ಯವನ್ನು ಸವಿಯುವುದು ಸಂತಸ ತಂದಿದ್ದು, ಅದನ್ನು ವೀಡಿಯೋ ರೂಪದಲ್ಲಿ ಮುಂದುವರಿಸುವಂತೆ ಸಲಹೆ ನೀಡಿದರು.
ಪುಣೆಯ ಬೀದಿಗಳಲ್ಲಿ ವಡಾ ಪಾವ್ ಮತ್ತು ಮಿಸಲ್ ಪಾವ್‌ನಂತಹ ಜನಪ್ರಿಯ ಮಹಾರಾಷ್ಟ್ರದ ಬೀದಿ ಆಹಾರವನ್ನು ಆನಂದಿಸಿದರು. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ಪ್ರಧಾನಿ ಮೋದಿ ಪ್ರತಿಕ್ರಿಯೆ
ಜಪಾನ್ ರಾಯಭಾರಿ ಸುಜುಕಿ ಅವರ ವೈರಲ್ ವೀಡಿಯೊಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. “ಮಿಸ್ಟರ್ ರಾಯಭಾರಿ, ಇದು ನೀವು ಸೋತರೂ ಬೇಸರಗೊಳ್ಳಲು ಸಾಧ್ಯವಿಲ್ಲದ ಸ್ಪರ್ಧೆಯಾಗಿದೆ.” ನೀವು ಭಾರತದ ಪಾಕಶಾಲೆಯ ವೈವಿಧ್ಯತೆಯನ್ನು ಆನಂದಿಸುತ್ತಿರುವುದನ್ನು ಮತ್ತು ಅದನ್ನು ಪ್ರದರ್ಶಿಸುವುದನ್ನು ನೋಡಲು ಸಂತೋಷವಾಗಿದೆ. ಇಂತಹ ವೀಡಿಯೋಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿರಿ” ಎಂದು ಟ್ವೀಟ್ ಮಾಡಿದ್ದಾರೆ. ಸುಜುಕಿ ಟ್ವೀಟ್ ಮಾಡಿರುವ 22 ಸೆಕೆಂಡುಗಳ ಕ್ಲಿಪ್ ಇದುವರೆಗೆ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.