ಕೇರಳದಲ್ಲಿ ಜಾವಡೇಕರ್, ನಳಿನ್: ಕ್ಯಾಲಿಕಟ್ಬ ಮಾಜಿ ಮೇಯರ್ ಜೊತೆ ಮಾತುಕತೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ಕೇರಳ ಚುನಾವಣಾ ಪ್ರಭಾರಿ, ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ಸಹ ಪ್ರಭಾರಿ, ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಕೇರಳ ಪ್ರವಾಸದಲ್ಲಿದ್ದು ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ರಣತಂತ್ರ ರೂಪಿಸುತ್ತಿದ್ದಾರೆ.

ಭಾನುವಾರ ಕ್ಯಾಲಿಕಟ್ ನ ಮಾಜಿ ಮೇಯರ್ ಸಿ.ಜೆ ರೋಬಿನ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಅವರು ಒಂದಷ್ಟು ಕಾಲ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ವಿ.ಕೆ. ಸಜೀವನ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಕ್ಯಾಲಿಕಟ್ ಕೌನ್ಸಿಲರ್ ಟಿ. ರನೀಶ್, ಬಿಜೆಪಿ ರಾಜ್ಯ ವಕ್ತಾರರಾದ ಅಡ್ವಕೇಟ್ ವಿ.ಪಿ. ಪದ್ಮನಾಭನ್, ಕ್ಯಾಲಿಕಟ್ ಲೋಕಸಭಾ ಕ್ಷೇತ್ರದ ಉಸ್ತುವಾರಿಗಳಾದ ಕೆ. ನಾರಾಯಣನ್ ಮಾಸ್ಟರ್ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!