ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಅಮಿತಾಬ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಮೇಲೆ ಬೇಸರಗೊಂಡಿದ್ದಾರೆ.
ಹೌದು, ಅದಕ್ಕೆ ಕಾರಣ ಇದ್ದು, ಅದೇನೆಂದರೆ ಇತ್ತೀಚೆಗೆ ಜಯಾ ಬಚ್ಚನ್ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ (Toilet Ek Prem Katha) ಸಿನಿಮಾವನ್ನು ಟೀಕಿಸಿದ್ದರು. ಇದರಿಂದ ಅಕ್ಷಯ್ ಕುಮಾರ್ ಅವರಿಗೆ ಬೇಸರ ಆಗಿದೆ.
ಅಕ್ಷಯ್ ಕುಮಾರ್ ಅಭಿನಯಿಸಿದ ಶೌಚಾಲಯ ನಿರ್ಮಾಣ ಮತ್ತು ಗ್ರಾಮ ನೈರ್ಮಲ್ಯದ ಬಗ್ಗೆ ಜಾಗ್ರತೆ ಮೂಡಿಸುವಂತಹ ಸಿನಿಮಾ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ . ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕೂಡ ಉತ್ತಮ ಗಳಿಕೆ ಆಗಿತ್ತು.
ಆದರೆ ಜಯಾ ಬಚ್ಚನ್ ಅವರು, ‘ಆ ಸಿನಿಮಾದ ಶೀರ್ಷಿಕೆ ನೋಡಿ. ಅಂಥ ಟೈಟಲ್ ಇರುವ ಸಿನಿಮಾವನ್ನು ನಾನು ನೋಡುವುದೇ ಇಲ್ಲ. ಇಷ್ಟು ಜನರಲ್ಲಿ ಕೇವಲ ನಾಲ್ಕು ಜನ ಮಾತ್ರ ಆ ಸಿನಿಮಾ ನೋಡುತ್ತಾರೆ. ಹಾಗಾಗಿ ಅದು ಫ್ಲಾಪ್ ಸಿನಿಮಾ’ ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅಕ್ಷಯ್, ಅಂತಹ ಸಿನಿಮಾಗಳನ್ನು ಯಾರೋ ಟೀಕಿಸುತ್ತಾರೆ ಅಂತ ನನಗೆ ಅನಿಸಲ್ಲ. ಒಂದು ವೇಳೆ ಟೀಕೆ ಮಾಡಿದ್ದರೆ ಅವರು ಮೂರ್ಖರೇ ಆಗಿರಬೇಕು. ಪ್ಯಾಡ್ ಮ್ಯಾನ್, ಟಾಯ್ಲೆಟ್ ಏಕ್ ಪ್ರೇಮ್ ಕಥಾ, ಏರ್ಲಿಫ್ಟ್, ಕೇಸರಿ, ಕೇಸರಿ 2 ರೀತಿಯ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದೇನೆ. ಇಂಥ ಸಿನಿಮಾಗಳನ್ನು ಟೀಕಿಸುವವರು ಖಂಡಿತಾ ಮೂರ್ಖರು. ಹೃದಯಪೂರ್ವಕವಾಗಿ ನಾನು ಆ ಸಿನಿಮಾಗಳನ್ನು ಮಾಡಿದ್ದೇನೆ. ಆ ಸಿನಿಮಾಗಳು ಜನರಿಗೆ ಸಾಕಷ್ಟು ವಿಷಯಗಳನ್ನು ತಿಳಿಸುತ್ತವೆ ಎಂದು ಹೇಳಿದ್ದಾರೆ.
ಮಾತು ಮುಂದುವರಿಸಿ, ಈಗ ಅವರು ಹೀಗೆ ಹೇಳಿದ್ದಾರೆ ಎಂದರೆ ಸರಿಯೇ ಇರಬೇಕು. ನನಗೆ ಗೊತ್ತಿಲ್ಲ. ಅವರು ಹೇಳುತ್ತಿದ್ದಾರೆ ಎಂದರೆ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ರೀತಿಯ ಸಿನಿಮಾ ಮಾಡಿ ನಾನು ಏನೋ ತಪ್ಪು ಮಾಡಿದ್ದೇನೆ ಎನಿಸುತ್ತದೆ’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.