ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದ್ದು, ಎಲ್ಲಾ ಪಕ್ಷಗಳು ಗೆಲುವಿಗಾಗಿ ರಣತಂತ್ರ ರೂಪಿಸುತ್ತಿದ್ದು, ಜೆಡಿಎಸ್ ಕೂಡ ಭರ್ಜರಿ ತಯಾರಿ ನಡೆಸುತ್ತಿದ್ದೆ. ಇದರ ಭಾಗವಾಗಿ 93 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
2023ರ ಚುನಾವಣೆಗೆ ಜೆಡಿಎಸ್ ಪಟ್ಟಿ ಬಿಡುಗಡೆ ಬಗ್ಗೆ ಹಲವರು ಪ್ರಶ್ನೆ ಕೇಳಿದ್ದರು. ಈ ಕಾರಣಕ್ಕೆ ಇಂದು ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಸದ್ಯ ಹಲವು ಜನರಿಗೆ ಟಿಕೆಟ್ ಘೋಷಣೆಯಾಗಿದ್ದು, ಹಿರಿಯ ಮೂಕನಾದ ಜಿ.ಟಿ.ದೇವೇಗೌಡರಿಗೆ ಚಾಮುಂಡೇಶ್ವರಿಯಲ್ಲಿ ಟಿಕೆಟ್ ಸಿಕ್ಕಿದರೆಜಿಟಿಡಿ ಪುತ್ರ ಹರೀಶ್ ಗೌಡಗೆ ಹುಣಸೂರಿನಿಂದ ಚುನಾವಣಾ ಅಗ್ನಿ ಪರೀಕ್ಷೆಗೆ ಇಳಿಯುತ್ತಿದ್ದಾರೆ.
ಇನ್ನು ಚನ್ನಪಟ್ಟಣದಿಂದ ಎಚ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ, ರಾಮನಗರದಿಂದ ನಿಖಿಲ್ ಸ್ಪರ್ಧಿಸಲಿದ್ದಾರೆ.ಆದ್ರೆ ಹಾಸನ ಜಿಲ್ಲೆಯ ಟಿಕೆಟ್ ಘೋಷಣೆಯಾಗಿಲ್ಲ. ಈ ಜಿಲ್ಲೆಯ ಟಿಕೆಟ್ ಹಂಚಿಕೆಯ ಅಧಿಕಾರವನ್ನು ದೇವೇಗೌಡ ಮತ್ತು ರೇವಣ್ಣಗೆ ಕೊಟ್ಟಿದ್ದಾರೆ.
ಹೀಗಿದೆ ಟಿಕೆಟ್ ಹಂಚಿಕೆ: