ಹೊಸದಿಗಂತ ಡಿಜಿಟಲ್ ಡೆಸ್ಕ್ :
ವಿಧಾನ ಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಿನಾಮೆ ಪರ್ವ ಆರಂಭವಾಗಿದ್ದು, ಅರಸಿಕೆರೆಯ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಭಾನುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಹಾಸನದಿಂದ 300ಕ್ಕೂ ಹೆಚ್ಚಿನ ಬೆಂಗಲಿಗರೊಂದಿಗೆ ಶಿರಸಿ ಸ್ಪೀಕರ್ ಕಚೇರಿಗೆ ಆಗಮಿಸಿದ ಅವರು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ತಮ್ಮ ರಾಜೀನಾಮೆ ಪತ್ರ ನೀಡಿದರು.
ಶಿವಲಿಂಗೇಗೌಡರು 2008, 2013, 2018 ರಲ್ಲಿ ಹಾಸನ ಜಿಲ್ಲೆಯ ಅರಸಿಕೆರೆಯಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿ ಆಯ್ಕೆಯಾಗಿದ್ದರು.
ಪಕ್ಷದ ಯಾವುದೇ ಕಾರ್ಯಕಲಾಪಗಳಿಗೆ ಭಾಗಿಯಾಗದೇ ಕಳೆದ ಆರು ತಿಂಗಳಿನಿಂದ ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದ ಶಿವಲೆಂಗೇಗೌಡ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಎ ಟಿ ರಾಮಸ್ವಾಮಿ ರಾಜೀನಾಮೆ ನಂತರ ಜೆಡಿಎಸ್ ನ ಮತ್ತೊಂದು ವಿಕೆಟ್ ಪತನವಾದಂತಾಗಿದೆ.