ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನಗರ ಜಿಲ್ಲೆ ಮರುನಾಮಕರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಹಾಸನವೇ ಹೊರತು ಜೆಡಿಎಸ್ ಅಲ್ಲ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಕುಮಾರಸ್ವಾಮಿಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ರಾಮನಗರ ಕ್ಷೇತ್ರವನ್ನು ಮರುನಾಮಕರಣ ಮಾಡುವುದಕ್ಕೆ ಜೆಡಿಎಸ್ ವಿರೋಧ ವ್ಯಕ್ತಪಡಿಸಿರುವ ಕುರಿತು ಮಾತನಾಡಿದ ಅವರು, ಹಾಸನದ ಜನರಿಗೆ ಬೆಂಗಳೂರಿನ ಸಂಪೂರ್ಣ ಇತಿಹಾಸ ತಿಳಿದಿಲ್ಲ. ಅದಕ್ಕಾಗಿಯೇ ಅವರು ಅದನ್ನು ವಿರೋಧಿಸುತ್ತಾರೆ.
ಬೆಂಗಳೂರಿನೊಂದಿಗೆ ನಮಗೆ ಅವಿನಾಭಾವ ಸಂಬಂಧವಿದೆ. ನಾವು ಬೆಂಗಳೂರು ಹಳ್ಳಿಯಿಂದ ಬಂದಿದ್ದೇವೆ. ರಾಮನಗರ ಹೆಸರು ಬದಲಾದರೂ ಕಚೇರಿ ಮಾಯವಾಗಲ್ಲ. ರಾಮನಗರ ಜಿಲ್ಲಾ ಕೇಂದ್ರವಾಗಲಿದೆ. ಆದರೆ, ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಿಸುವಂತೆ ಮನವಿ ಮಾಡಿದ್ದೇವೆ ಎಂದರು.