ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಯೊಬ್ಬರದ್ದೂ ‘ಬ್ಯುಸಿ’ಲೈಫು…ಇದರಿಂದಾಗಿ ದೇಹಕ್ಕೆ ಬೇಕಾದ ವ್ಯಾಯಾಮ ಸಿಗುವುದಿಲ್ಲ. ಬೊಜ್ಜು ದೇಹವನ್ನಾವರಿಸುತ್ತದೆ… ದೇಹಾರೋಗ್ಯ ಕೆಡುತ್ತದೆ…ಆಧುನಿಕ ಜಗತ್ತಿಗನುಗುಣವಾಗಿ ನಾವು ಬಳಸುವ ಆಹಾರ ಪದ್ಧತಿಗಳು ನಮ್ಮ ಆರೋಗ್ಯದ ಮೇಲೆ ಭಾರೀ ಹೊಡೆತ ನೀಡುತ್ತಿದೆ ಎಂಬ ಸತ್ಯವನ್ನು ಒಪ್ಪಲೇಬೇಕು.
ದೇಹದ ತೂಕ ಇಳಿಸಿಕೊಳ್ಳಲು ಅನೇಕರು ಸಾಕಷ್ಟು ಶ್ರಮ ವಹಿಸುತ್ತಾರೆ. ಜಿಮ್, ವಾಕಿಂಗ್, ಜಾಗಿಂಗ್, ಡಯಟ್ ಹೀಗೆ ಹಲವು ಕ್ರಮಗಳನ್ನು ಅನುಸರಿಸಿದರೂ ನಾವಂದುಕೊಂಡ ಮಟ್ಟಕ್ಕೆ ಪ್ರಯೋಜನಗಳಾಗುವುದಿಲ್ಲ. ಇದು ವಾಸ್ತವ ಸ್ಥಿತಿ…ವಾಸ್ತವ ಸತ್ಯವೂ ಹೌದು.
ದೇಹದ ತೂಕ ಕಡಿಮೆಮಾಡಿಕೊಳ್ಳಲು ಸರಳವಾದ ಕೆಲವು ದಾರಿಗಳಿವೆ. ಮನೆಯ ಅಡುಗೆ ಮನೆಯಲ್ಲಿರುವ ಜೀರಿಗೆ, ಕೊತ್ತಂಬರಿಯನ್ನು ಕುದಿಸಿ ಆರಿಸಿದ ನೀರು ನಿಮ್ಮ ಕೊಬ್ಬು ಕಡಿಮೆಮಾಡಲು ಸಹಕಾರಿಯಾಗುತ್ತದೆ!