ಹೊಸದಿಗಂತ ಹುಬ್ಬಳ್ಳಿ:
ಕೇಶ್ವಾಪುರ ರಮೇಶಭವನದ ಭುವನೇಶ್ವರಿ ಆಭರಣ ಮಳಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಓರ್ವ ಅಂತರಾಜ್ಯ ಕಳ್ಳನ ವಶಪಡಿಸಿಕೊಂಡು ತಪಾಸಣೆ ನಡೆಸುವ ವೇಳೆ ತಪ್ಪಿಸಿಕೊಳ್ಳು ಯತ್ನಿಸಿದಾಗ ಪೊಲೀಸ್ ಆತನ ಮೇಲೆ ಗುಂಡು ಹಾರಿಸಿದ ಘಟನೆ ತಾರಿಹಾಳ ಕ್ರಾಸ್ ಬಳಿ ಬೆಳಿಗ್ಗೆ 6.30 ಕ್ಕೆ ನಡೆದಿದೆ.
ಮುಂಬೈ ಮೂಲದ ಫರ್ಹಾನ್ ಶೇಖ್ ಎಂಬಾತನ ಮೇಲೆ ಪೊಲೀಸ್ ಗುಂಡು ಹಾರಿಸಿದ್ದಾರೆ. ಆರೋಪಿ ಫರ್ಹಾನ್ ಶೇಖ್ ನನ್ನು ಗುರುವಾರ ಬಂಧಿಸಲಾಗಿತ್ತು. ಈ ಪ್ರಕರಣ ಸಂಬಂಧಿಸಿ ಇನ್ನುಳಿದ ಆರೋಪಿ ಸೆರೆಹಿಡಿಯಲು ಹಾಗೂ ತಪಾಸಣೆ ನಡೆಸಲು ಮುಂದಾದಾಗ ಆರೋಪಿಯು ಕೇಶ್ವಾಪುರ ಮಹಿಳಾ ಕಾನಸ್ಟೆಬಲ್ ಸುಜಾತ ಹಾಗೂ ಮಹೇಶ ಎಂಬವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಗೋಕುಲ್ ರಸ್ತೆ ಪೊಲೀಸ್ ಠಾಣೆಯ ಪಿಎಸ್ಐ ಕವಿತಾ ಮಾಡ್ಯಾಳ್ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾಗೂ ಒಂದು ಸುತ್ತು ಅವನ ಮೇಲೆ ಗುಂಡು ಹಾರಿಸಿದ್ದಾರೆ.
ತಕ್ಷಣ ಆರೋಪಿಯನ್ನು ವಶಕ್ಕೆ ಪಡೆದು ಚಿಕಿತ್ಸೆ ನಗರದ ಕಿಮ್ಸ್ ಆಸ್ಪತ್ರೆ ರವಾನಿಸಲಾಗಿದೆ. ಆರೋಪಿ ಫರ್ಹಾನ್ ಶೇಖ್ ವಿರುದ್ಧ ಹೈದರಾಬಾದ್, ಗುಲ್ಬರ್ಗ, ಅಹ್ಮದ ನಗರ, ಸುರತ್ ಹಾಗೂ ಮುಂಬೈನಲ್ಲಿ ಕೊಲೆ, ದರೋಡೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.